ಗಂಗಾವತಿ:ಚುನಾವಣಾ ಕಾರ್ಯದಲ್ಲಿ ಸುಡು ಬಿಸಿಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ನಿರ್ಜಲೀಕರಣ (ಡಿ ಹೈಡ್ರೇಷನ್) ಆಗದಿರಲೆಂದು ಔಷಧ ವ್ಯಾಪಾರಿಗಳ ಸಂಘದಿಂದ ಗುರುವಾರ ಓ.ಆರ್.ಎಸ್.ಪೌಡರ್ ವಿತರಿಸಲಾಯಿತು.
ಸ್ಥಳೀಯ ಪೋಲೀಸ್ ಠಾಣೆಗೆ ತೆರಳಿದ ಗಂಗಾವತಿ ನಗರದ ಔಷಧ ವಿತರಕರು, 2000 ಕ್ಕೂ ಹೆಚ್ಚು ಓ.ಆರ್.ಎಸ್.ಸಾಚೆಟ್ ಗಳನ್ನು ಪೋಲೀಸ್ ಸಿಬ್ಬಂದಿಗೆ ನೀಡಿದರು.ಈ ಸಂದರ್ಭದಲ್ಲಿ ಬಿಸಿಲಿನಲ್ಲಿ ಕಾರ್ಯನಿರ್ವಹಿಸುವಾಗ ಕುಡಿಯುವ ನೀರಿನಲ್ಲಿ ಓ.ಆರ್.ಎಸ್.ಪೌಡರ್ ಸೇರಿಸಿಕೊಂಡು ಸೇವಿಸಲು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಮತ್ತು ರಿಜಿಸ್ಟರ್ಡ ಫ಼ಾರ್ಮಸಿಸ್ಟಗಳ ಸಂಘದ ರಾಜ್ಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪೋಲಿಸ್ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು.
ಔಷಧ ವಿತರಕರಾದ ರಘುನಾಥ ದರೋಜಿ ಲಕ್ಷ್ಮಿ & ಲಕ್ಷ್ಮಿ , ನಾಗರಾಜ ಸ್ವಾಮಿ ಎಚ್.ವಿ.ಫ಼ಾರ್ಮಾ, ಗೋಖುಲ ಚಂದ್ ವಾಸವಿ ಎ೦ಟರಪ್ರೈಸಸ್, ಸುರೇಂದ್ರ ಗುರು ಮೆಡಿಕಲ್ ಏಜೆನ್ಸಿ ,ರಮೇಶ್ ಇಟ್ಟಿನ ಮಂಜುನಾಥ ಫ಼ಾರ್ಮಾ, ಚಿದಾನಂದ ಚಳ್ಳಾರಿ ಶ್ರೀ ವೀರಭದ್ರ ಎ೦ಟರಪ್ರೈಸಸ್, ಸುರೇಶ್ ಕೀರ್ತನಾ ಫ಼ಾರ್ಮಾ ಉಪಸ್ಥಿತರಿದ್ದರು.