ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ

Share the Post Now

ಬೆಳಗಾವಿ, ಸಂದೇಶ



ಪೂಜ್ಯರ ಸಮ್ಮುಖದಲ್ಲಿ ಡಾ. ಬೀಳಗಿ ಅವರು ರಚಿಸಿದ ಕೃತಿ ಲೋಕಾರ್ಪಣೆ.

ವರದಿ: ಸಂಗಮೇಶ ಹಿರೇಮಠ.

ಮುಗಳಖೋಡ: ಸಮೀಪದ ಹಂದಿಗುಂದ ಗ್ರಾಮದಲ್ಲಿ ಸೋಮವಾರದಂದು ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ ಪಡೆದ ಡಾ. ಮಧುಸೂದನ ಬೀಳಗಿ ಇವರಿಂದ ರಚಿತವಾದ,“ರಾಯಬಾಗ ಪರಿಸರದ ಹಾಲುಮತ ಪರಂಪರೆ” ಎಂಬ ಕೃತಿಯನ್ನು ಪೂಜ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಖ್ಯಾತ ಸಾಹಿತಿಗಳಾದ ಡಾ. ವಿ.ಎಸ್. ಮಾಳಿಯವರು ಕೃತಿ ಪರಿಚಯ ಮಾಡುತ್ತ, ಬಾಗೆನಾಡಿನ ಹಾಲುಮತದ ಪ್ರಮುಖ ಐದು ದೈವಗಳಾದ ಆಲಕನೂರಿನ ಶ್ರೀ ಕರೇಸಿದ್ದೇಶ್ವರ, ಯಲ್ಪಾರಟ್ಟಿಯ ಶ್ರೀ ಅರಣ್ಯಸಿದ್ಧೇಶ್ವರ, ಕಂಕಣವಾಡಿಯ ಶ್ರೀ ಹಾಲಸಿದ್ಧೇಶ್ವರ, ಚಿಂಚಲಿಯ ಶಕ್ತಿಮಾತೆ ಶ್ರೀ ಮಾಯವ್ವಾ ಮತ್ತು ಬೆಕ್ಕೇರಿಯ ಶ್ರೀ ಲಕ್ಕವ್ವ ದೇವತೆಯನ್ನು ಪರಿಚಯಿಸುವ ಈ ಮಹಾಪ್ರಬಂಧವು ಕುರುಬ ಜನಾಂಗದ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಹಾಲುಮತದ ಆರಾಧನಾ ಕಲೆಗಳು, ಸಾಮಾಜಿಕ ಮತ್ತು ಧಾರ್ಮಿಕ ಆಚರಣೆ, ನಂಬಿಕೆ, ಸಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸಿ ಈ ಪರಿಸರದ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಈ ಜನಾಂಗದ ಪರಂಪರೆಯ ಜೀವನದಲ್ಲಿ ಕಾಲ ಕಾಲಕ್ಕೆ ಉಂಟಾದ ತಲ್ಲಣಗಳನ್ನು ಸೂಕ್ಷ್ಮವಾಗಿ ವಿವೇಚಿಸುತ್ತಿದ್ದು, ಪ್ರತಿಯೊಬ್ಬರು ಓದಲೇ ಬೇಕಾದ ಕೃತಿ ಇದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿಯ ರುದಾಕ್ಷಿಮಠದ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಹಂದಿಗುಂದದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಸರ್ವಾಧ್ಯಕ್ಷತೆಯನ್ನು ಅತ್ತಿಗೇರಿಯ ಬಸವಧಾಮದ ಪೂಜ್ಯ ಶ್ರೀ ತಾಯಿಯವರು ಹಾಗೂ ಶ್ರೀ ಪ್ರಭು ಮಹಾಸ್ವಾಮಿಗಳು, ಶ್ರೀ ಗುರುಪಾದ ಮಹಾಸ್ವಾಮಿಗಳು, ಶ್ರೀ ಬಸವಕಿರಣ ಮಹಾಸ್ವಾಮಿಗಳು, ಶ್ರೀ ಗುರುದೇವ ಮಹಾಸ್ವಾಮಿಗಳು, ಶ್ರೀ ಶಿವಕುಮಾರ ಮಹಾಸ್ವಾಮಿಗಳು,
ಶ್ರೀ ವಿವೇಕ ದೇವರು ಮುಖ್ಯ ನೇತೃತ್ವ ವಹಿಸಿದ್ದರು.

ಅತಿಥಿಗಳಾಗಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಅಶೋಕ ಮಳಗಲಿ, ಶರಣವಚನ ವಾಹಿನಿ ಅಧ್ಯಕ್ಷರಾದ ಶ್ರೀ ಆಯ್. ಆರ್. ಮಠಪತಿ, ಡಾ. ಅಶೋಕ ನರೋಡೆ ಆಗಮಿಸಿದ್ದರು. ಗೋಪಾಲ ಜಾಧವ, ಬೀರಪ್ಪ ತಡಸಲೂರ, ರಾಯಬಾಗ ತಾಲೂಕಾ ಕದಳಿ ವೇದಿಕೆಯ ಸರ್ವ ಸದಸ್ಯರು, ಗ್ರಾಮದ ಗಣ್ಯರು, ತಾಯಂದಿರು ಉಪಸ್ಥಿತರಿದ್ದರು.

ಶ್ರೀ ಜೆ. ಆರ್. ಮೊಗವೀರ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಎಮ್. ಜಿ. ಬಾಳೋಜಿ ವಂದನಾರ್ಪಣೆ ಮಾಡಿದರು.

Leave a Comment

Your email address will not be published. Required fields are marked *

error: Content is protected !!