ಬ್ರಾಹ್ಮಿ ಎಲೆ’ಯಿಂದ ‘ಆರೋಗ್ಯ ಪ್ರಯೋಜನ’ಗಳು ಎಷ್ಟು ಗೊತ್ತಾ?

Share the Post Now

ಇಲ್ಲಿದೆ ಮಾಹಿತಿಬ್ರಾಹ್ಮಿ ಇದು ಒಂದು ಆಯುರ್ವೇದ ಶಕ್ತಿ ಹೊಂದಿರುವ ಸಸ್ಯ ಇದ ಆಗುವ ಕೂದಲಿನ ಪ್ರಯೋಜನಗಳನ್ನು ಕೇಳಿರಬಹುದು. ಬ್ರಾಹ್ಮಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಆರೋಗ್ಯವನ್ನು ಹೆಚ್ಚಿಸಬಹುದು. ಬ್ರಾಹ್ಮಿ ಕೂದಲಿಗೆ ಪ್ರಯೋಜನಕಾರಿ ಮಾತ್ರವಲ್ಲ, ವಿವಿಧ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನೂ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನು ಬುದ್ದಿ ಶಕ್ತಿ ಹೆಚ್ಚಿಸುವಲ್ಲಿ ಕೂಡ ಸೇವನೆ ಮಾಡಲಾಗುತ್ತದೆ .

ಬ್ರಾಹ್ಮಿ ಎಲೆ ಒತ್ತಡ ನಿವಾರಕವಾಗಿದೆ. ಬ್ರಾಹ್ಮಿಯ ಸೇವನೆಯು ಮಾನಸಿಕ ಒತ್ತಡವನ್ನು ನಿವಾರಿಸುವ ಗುಣ ಹೊಂದಿದೆ. ಇದರ ಗುಣ ಶೀತವಾಗಿದ್ದು, ಇದು ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

ಇದು ಒತ್ತಡದ ಹಾರ್ಮೋನುಗಳಾದ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ಗುಣವನ್ನೂ ಹೊಂದಿದೆ. ಹೀಗಾಗಿ ಇದರ ಎಲೆ ತಿನ್ನುವುದರ ಜೊತೆಗೆ ಅದರ ಎಣ್ಣೆಯನ್ನು ತಲೆಗೆ ಹಾಕುವುದರಿಂದ ಒತ್ತಡ ನಿವಾರಣೆಯಾಗುತ್ತದೆ.

ಬ್ರಾಹ್ಮಿ ಎಲೆಯನ್ನು ಸೇವನೆ ಮಾಡುವುದರಿಂದ ಮೆದುಳನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ. ಇದರ ಸೇವನೆ ಮನಸ್ಸನ್ನು ತೀಕ್ಷ್ಣಗೊಳಿಸುವುದಲ್ಲದೆ ಏಕಾಗ್ರತೆಯನ್ನು ಕೂಡ ಹೆಚ್ಚಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಬ್ರಾಹ್ಮಿಯಲ್ಲಿದೆ. ಬ್ರಾಹ್ಮಿ ಸೇವನೆಯಿಂದ ದೇಹ ಸದೃಢವಾಗಿ ರೋಗ ನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತದೆ. ಇದರಿಂದ ರೋಗಗಳ ಅಪಾಯ ಕಡಿಮೆಯಾಗುತ್ತದೆ. ಇದರಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳಿವೆ, ಇದು ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಕೂಡ ಸಹಕಾರಿಯಾಗಿದೆ.

ಬ್ರಾಹ್ಮಿಯನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಬಹುದು. ಇದು ಸಕ್ಕರೆ ಮಟ್ಟವನ್ನು ಸರಿಯಾಗಿ ನಿಯಂತ್ರಿಸುವುದರ ಜೊತೆಗೆ ಹೈಪೋಗ್ಲೈಸೀಮಿಯಾ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ.

ಬ್ರಾಹ್ಮಿಯನ್ನು ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸಮಾಡುತ್ತದೆ. ಕರುಳಿನಿಂದ ಹಾನಿಕಾರಕ ವಸ್ತುಗಳನ್ನು ಸ್ವಚ್ಛಗೊಳಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಫೈಬರ್ ಇದು ಒಳಗೊಂಡಿದೆ ಹೀಗಾಗಿ ದೇಹದಲ್ಲಿ ಸರಿಯಾಗಿ ಜೀರ್ಣಕ್ರಿಯೆ ಆಗುತ್ತದೆ.

Leave a Comment

Your email address will not be published. Required fields are marked *

error: Content is protected !!