ಬಸರಕೋಡ ಪಿ.ಕೆ.ಪಿ.ಎಸ್ ಚುನಾವಣೆಯಲ್ಲಿ 12 ನಿರ್ದೇಶಕರ ಅವಿರೋಧ ಆಯ್ಕೆ

Share the Post Now


ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ (ಪಿ.ಕೆ.ಪಿ.ಎಸ್) ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡನೇ ಅವಧಿಗೆ (2025-26 ರಿಂದ 2030-31) ಆಡಳಿತ ಮಂಡಳಿಯು ಅವಿರೋಧ ಆಯ್ಕೆಯನ್ನು ಕಂಡಿದೆ.
ನಿರ್ದೇಶಕರ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ಕೆಲವರು ಹಿಂದಕ್ಕೆ ಪಡೆದ ಕಾರಣ, 12 ಸ್ಥಾನಗಳಿಗೆ ಅವಿರೋಧ ಆಯ್ಕೆ ಘೋಷಿಸಲಾಯಿತು ಎಂದು ಚುನಾವಣಾಧಿಕಾರಿ ವಿಜಯಕುಮಾರ್ ಉತ್ನಾಳ ಅವರು ಮಂಗಳವಾರ ಪ್ರಕಟಿಸಿದರು.

ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರುಗಳ ವಿವರ;
ಸಾಲಗಾರರ ಸಾಮಾನ್ಯ (5 ಸ್ಥಾನ): ಹೇಮಣ್ಣ.ಬ.ಮೇಟಿ, ಬಸವರಾಜ ಬಿ‌.ಪಾಟೀಲ್, ಶಾಂತಪ್ಪ.ಡಿ ಸಂಕನಾಳ, ಬಾಬು ಎಂ ಸೂಳೆಭಾವಿ, ಮತ್ತು ಸಿಂಧೂ ಬಲ್ಲಾಳ ನಾಡಗೌಡ. (ಈ ವಿಭಾಗದಲ್ಲಿ 9 ಜನ ನಾಮಪತ್ರ ಸಲ್ಲಿಸಿದ್ದರು, 4 ಜನ ಹಿಂಪಡೆದರು).
ಸಾಲಗಾರರ ಮಹಿಳಾ (2 ಸ್ಥಾನ): ಸಿದ್ದಮ್ಮ.ಆರ್ ಬಿರಾದಾರ ಮತ್ತು ಪಾರ್ವತಿ ಎ. ಸಾಲಿಮಠ.
ಹಿಂದುಳಿದ ವರ್ಗ (ಅ) (1 ಸ್ಥಾನ): ಲಕ್ಕಪ್ಪ ಸೋಮನಾಳ.
ಹಿಂದುಳಿದ ವರ್ಗ (ಬ) (1 ಸ್ಥಾನ): ಸೋಮಪ್ಪ ಮೇಟಿ.
ಪರಿಶಿಷ್ಟ ಜಾತಿ (1 ಸ್ಥಾನ): ಶೇಖಪ್ಪ ಚಲವಾದಿ. (ಇಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿ ಒಬ್ಬರು ಹಿಂಪಡೆದರು).
ಪರಿಶಿಷ್ಟ ಪಂಗಡ (1 ಸ್ಥಾನ): ಮಡಿವಾಳಪ್ಪ ತಳವಾರ.
ಬಿನ್ ಸಾಲಗಾರ  (1 ಸ್ಥಾನ): ಸುನಿಲಕುಮಾರ್ ಸೂಳೆಭಾವಿ. (ಈ ವಿಭಾಗದಲ್ಲಿ 3 ನಾಮಪತ್ರ ಸಲ್ಲಿಕೆಯಾಗಿ 2 ಹಿಂಪಡೆಯಲಾಯಿತು).

ಅವಿರೋಧವಾಗಿ ಆಯ್ಕೆಯಾದ ಎಲ್ಲಾ 12 ನಿರ್ದೇಶಕರಿಗೆ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!