ವರದಿ: ಸಂತೋಷ ಮುಗಳಿ, ಮುಗಳಖೋಡ
ಮುಗಳಖೋಡ: ಹಾರೂಗೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಗೆ ಹಾಜರಾಗಲು ಬಂದ ಬಿಜೆಪಿ ನಾಯಕ ಬಿ.ಎಸ ಯಡಿಯೂರಪ್ಪ ಅವರು ಮೊದಲು ಪಟ್ಟಣದ ಪುಣ್ಯಕ್ಷೇತ್ರವಾದ ಸದ್ಗುರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಮಠದ ಆವರಣದಲ್ಲಿ ಹೆಲಿಫ್ಯಾಡ್ ದಿಂದ ಇಳಿದು ನೇರವಾಗಿ ಸದ್ಗುರು ಶ್ರೀ ಯಲ್ಲಾಲಿಂಗರ ಕರ್ತೃ ಗದ್ದುಗೆಯ ವಿಶೇಷ ದರ್ಶನವನ್ನು ಪಡೆದರು. ನಂತರ ಮುಗಳಖೋಡದಿಂದ ರೋಡ್ ಶೋ ಮೂಲಕ ಹಾರೂಗೇರಿಯ ಬಿಜೆಪಿ ಕಾರ್ಯಕರ್ತರ ಸಭೆಗೆ ತೆರಳಿದರು.
ಈ ಸಂದರ್ಭದಲ್ಲಿ ಕುಡಚಿ ಮತಕ್ಷೇತ್ರದ ಅಭ್ಯರ್ಥಿ ಪಿ ರಾಜೀವ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಮಲ್ಲಿಕಾರ್ಜುನ ಖಾನಗೌಡರ, ಶಿವಬಸು ಕಾಪಸಿ, ಶಿವಾನಂದ ಮೆಕ್ಕಳಕಿ, ಶಿವಾನಂದ ಗೋಕಾಕ ಗೌಡಪ್ಪ ಖೇತಗೌಡರ, ಮಹಾದೇವ ಶೇಗುಣಸಿ, ಶಂಕರ ಕಡಕಬಾವಿ, ಸಿದ್ದು ಕುರಿಮನಿ, ಮುತ್ತಪ್ಪ ಬಾಳೋಜಿ, ದಿಲೀಪ್ ಗೌಲೆತ್ತಿನವರ, ಭಿಮಪ್ಪ ಬನಶಂಕರಿ ಸೋಮು ಹೊರಟ್ಟಿ, ಪುರಸಭೇ ಸದಸ್ಯರಾದ ಚೇತನ ಯಡವಣ್ಣವರ, ರಾಜು ನಾಯಿಕ, ಮಂಹಾಂತೇಶ ಯರಡತ್ತಿ, ಕೇಂಪಣ್ಣಾ ಅಂಗಡಿ, ಪರಶುರಾಮ ಕಡಕೊಳ ಹಾಗೂ ಬಿಜೆಪಿಯ ಎಲ್ಲ ಕಾರ್ಯಕರ್ತರು ಇದ್ದರು.