ಹಳ್ಳೂರ..
ಸಮಾಜದಲ್ಲಿ ಸರ್ವರೊಡನೆ ಬೆರೆತು ಪರೋಪಕಾರ ಮಾಡಿ ಬೇರೊಬ್ಬರಿಗೆ ಕೇಡಕನ್ನು ಬಯಸಿ ದ್ವೇಷ ಕಟ್ಟಿಕೊಂಡು ಪಾಪ ಕರ್ಮ ಮಾಡಿ ಕಷ್ಟಕ್ಕೆ ಗುರಿಯಾಗಬೇಡಿರಿ ಧಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕೆಂದು ಕಬ್ಬೂರ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ಅವರು ಶಿವಾಪೂರ ಗ್ರಾಮದಲ್ಲಿ ನಡೆದ ಶ್ರೀ ಅಡವಿಸಿದ್ದೇಶ್ವರ ಜಾತ್ರಾಮಹೋತ್ಸವದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಜಾತ್ರೆಗಳು ನಡೆಯುವುದರಿಂದ ಸಾಕಷ್ಟು ಪರಿವರ್ತನೆಗಳಾಗುತ್ತೇವೆ ಎಲ್ಲರೂ ಒಂದಾಗಿ ಶಿಸ್ತುಬದ್ಧವಾಗಿ ಬೆರೆತು ಮಹಾತ್ಮರ ದರ್ಶನ, ಆಶೀರ್ವಾದ ,ಅನ್ನದಾಸೋಹ ,ಜ್ಞಾನ ದಾಸೋಹವು ಕೂಡಾ ದೊರೆಯುತ್ತದೆ.
ಹಾಗೂ ಮನಸ್ಸು ಪರಿವರ್ತನೆ ಆಗುತ್ತದೆ ಎಂದು ಹೇಳಿದರು. ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ ಭವ್ಯವಾದ ಜಾತ್ರೆ ಯಶಸ್ವಿಯಾಗಿ ನಡೆಯಲು ಸಹಾಯ ಸಹಕಾರ ನೀಡಿದವರಿಗೆಲ್ಲ ಧನ್ಯವಾದ ಅರ್ಪಿಸಿದರು.
ಗುಡ್ಡಾಪೂರ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಮಾಜ ಸುಧಾರಣೆಯಲ್ಲಿ ಮಠ ಮಾನ್ಯಗಳ ಪಾತ್ರ ಪ್ರಮುಖ ವಹಿಸುತ್ತವೆ. ಪಿಡಿಓ ಶಿವಾನಂದ ಬಬಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರವಿವಾರದಂದು ಮಕ್ಕಳಿಂದ ತಂದೆ ತಾಯಿಗಳು ಪಾದ ಪೂಜೆ ಮಾಡಿಸಿ ಮಾನವೀಯತೆ ಮೆರೆದರು,ಸಹಸ್ರಾರು ಮುತ್ತೈದೆ ಹೆಣ್ಣುಮಕ್ಕಳಿಗೆ ಉಡಿ ತುಂಬಿ ದರು.ಸೋಮವಾರ ಮುಂಜಾನೆ ಕರ್ತೃ ಗದ್ದುಗೆಗೆ ಮಹಾರುದ್ರಾವಿಷೇಕ , ಪುಷ್ಪಾಲಂಕಾರ ನಡೆದು ನಂತರ ಜಂಗಮ ಪಟುಗಳಿಗೆ ಅಯ್ಯಾಚಾರ ಹಾಗೂ ದೀಕ್ಷಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಎನ್ ಜಿ ಹೆಬ್ಬಾಳ ಸ್ವಾಗತಿಸಿ. ಎಂ ಪಿ ಲಂಗೋಟಿ ನಿರೂಪಿಸಿ. ಹನಮಂತ ಶಿವಾಪೂರ ವಂದಿಸಿದರು.
ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು. ಕಾರ್ಯಕರ್ತರಿಗೆ ಗುರು ಹಿರಿಯರಿಗೆ, ಪತ್ರಕರ್ತರಿಗೆ, ಅಡವಿಸಿದ್ದರಾಮ ಸ್ವಾಮೀಜಿಗಳ ಮಾತೋಶ್ರೀ ಮಹಾದೇವಿ ತೆಗ್ಗಿನಮಠ ಅವರಿಗೆ ಸನ್ಮಾನ ಮಾಡಿ ಸತ್ಕರಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಅನೇಕ ಮಹಾತ್ಮರು ಗ್ರಾಮದ ಗುರು ಹಿರಿಯರಿದ್ದರು.