ಹಳ್ಳೂರ .
ಅತೀ ಆಸೆ ಜೀವಕ್ಕೆ ಅಪಾಯಕಾರಿ ಹೆಣ್ಣು ಹೊನ್ನು ಮಣ್ಣು ಆಸೆಗೆ ಬಿದ್ದು ಕೋಟ್ಯಾನ್ ಕೋಟಿ ಜನ ಸಾವನ್ನಪ್ಪಿದ್ದಾರೆ.ಆಸೆ ಆಮಿಷಕ್ಕೆ ಒಳಗಾಗಿ ಹೀನ ಕೃತ್ಯ ಮಾಡಿ ಪಾಪಕ್ಕೆ ಗುರಿಯಾಗಬಾರದು . ಮೃತ್ಯ ಯಾರನ್ನು ಬಿಡೋದಿಲ್ಲ ಶಿವನ ಬಕ್ತ ರಾವನ ಹೆಣ್ಣಿನ ಆಸೆಗೆ ಬಿದ್ದು ಕೆಟ್ಟ. ದೇವರಲ್ಲಿ ಅಪಾರವಾದ ನಂಬಿಕೆ ಇಟ್ಟು ನಾಮಸ್ಮರಣೆ ಮಾಡುತ್ತಾ ಇದ್ದರೆ ಕರ್ಮ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವುದು.ದುಶ್ಚಟಗಳಿಗೆ ಬಲಿಯಾಗಿ ಜೀವನಹಳ್ಳಿ ಹಾಳು ಮಾಡಿಕೊಳ್ಳಬೇಡಿರೆಂದು ಅಡವಿಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಅವರು ಗ್ರಾಮದ ಬಸವ ನಗರದ ದರಿದೇವರ ಹಾಗೂ ಜಕ್ಕಮ್ಮ ದೇವರ ಜಾತ್ರಾಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಕೆಟ್ಟ ಚಟಗಳಿಗೆ ಅನಾವಶ್ಯಕವಾಗಿ ಖರ್ಚು ಮಾಡುವ ಬದಲು ದೇವರ ಜಾತ್ರೆ ದಾನ ಧರ್ಮಕ್ಕೆ ಖರ್ಚು ಮಾಡಿದರೆ ದರಿದೇವರು ಸಕಲ ಸೌಭಾಗ್ಯ ನೀಡುತ್ತಾನೆ ಎಂದು ಹೇಳಿದರು. ಆಲಗೂರ ಶಾಂತಮೂರ್ತಿ ಲಕ್ಷ್ಮಣ ಮುತ್ಯಾ ಸಾನಿಧ್ಯ ವಹಿಸಿ ಮಾತನಾಡಿ ಜೀವನದಲ್ಲಿ ಪ್ರತಿಯೊಬ್ಬರೂ ತಪ್ಪು ತಡೆ ಮಾಡುವುದು ಸಹಜ ತಿದ್ದಿ ಬುದ್ಧಿ ಹೇಳಿ ಕ್ಷಮಿಸುವ ಗುಣ ಹೊಂದಿರಬೇಕು.
ದರೀದೇವರು ಪವಾಡ ಪುರುಷರು. ಜೀವನದಲ್ಲಿ ಗೆಲುವು ಸಾಧಿಸಬೇಕಾದರೆ ಗುರುವಿನ ಆಶೀರ್ವಾದ ಬೇಕು. ಹಿಂಸಾ ಮೋಸ ವಂಚನೆ ಮಾಡುವುದು ಮಹಾಪಾಪ. ಸ್ತ್ರೀಯರು ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪತಿವ್ರತೆ ಪಾಲಿಸಬೇಕು. ಭಕ್ತಿಯಿಂದ ಪೂಜೆ ಜಾತ್ರೆ ಮಾಡಿದಾಗ ಮಾತ್ರ ದೇವರಿಗೆ ಸಲ್ಲುತ್ತದೆಂದು ಹೇಳಿದರು. ಮಹಾದೇವ ನುಚ್ಚುಂಡಿ.ಮುತ್ತಪ್ಪ ನುಚ್ಚುಂಡಿ.ಸುಭಾಸ ಬ್ಯಾಳಿ.ಅಶೋಕ ನುಚ್ಚುಂಡಿ.ಬಸಪ್ಪ ಮಾಳಿ. ಭೀಮಪ್ಪ ನುಚ್ಚುಂಡಿ. ಪತ್ರೆಪ್ಪ ಬ್ಯಾಳಿ. ರವೀಂದ್ರ ನುಚ್ಚುಂಡಿ.ರಾಜು ಕಲ್ಮಡಿ.ಅಶೋಕ ಅಳಗೋಡಿ.ಅರ್ಜುನ ಬೋಳನ್ನವರ.ಪ್ರಕಾಶ ನುಚ್ಚುಂಡಿ. ಮಹಾಲಿಂಗ ನುಚ್ಚುಂಡಿ. ಈರಪ್ಪ ನುಚ್ಚುಂಡಿ ಸೇರಿದಂತೆ ಅನೇಕರಿದ್ದರು ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಸ್ವಾಗತಿಸಿ, ನಿರೂಪಿಸಿ.ಬಸವರಾಜ ಬೋಳನ್ನವರ ವಂದಿಸಿದರು.