ಸರ್ಟಿಫಿಕೇಟ್ ಗಾಗಿ ಶಿಕ್ಷಣ ಬೇಡ, ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ: ಶ್ರೀ ಡಾ. ಮಹಾಂತ ಸ್ವಾಮಿಗಳು.

Share the Post Now


ಕುಲಿಗೋಡ ಉತ್ಸವ, ಗುರುವಿನ ಪಾದ ಪೂಜೆ, ನೇಗಿಲಪೂಜೆ, ಮಕ್ಕಳ ಮನರಂಜನೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು.

ವರದಿ: ಸಂಗಮೇಶ ಹಿರೇಮಠ.

ಮುಗಳಖೋಡ: ಇಂದಿನ ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್ ಗಾಗಿ ಶಿಕ್ಷಣಕ್ಕೆ ಮುಂದಾಗಿದ್ದಾರೆ. ಅದನ್ನು ಬಿಟ್ಟು ಗುರುವಿನ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು ತಮ್ಮ ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಂಸ್ಕಾರಯುತವಾದ ಆತ್ಮಸ್ತೈರ್ಯ ಬೆಳೆಸಿಕೊಳ್ಳಿ, ಅಂಕಗಳು ಕಡಿಮೆ ಬಂದಿವೆ ಎಂದು ಆತ್ಮಹತ್ಯೆಯ ಬದಲಾಗಿ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುಬೇಕು ಸರ್ಟಿಫಿಕೇಟ್ ಗಳು ನಮ್ಮನ್ನು ಹುಡುಕಿಕೊಂಡು ಬರುವಂತೆ ನಾವು ಬೆಳೆಯಬೇಕು ಎಂದು ಶೇಗುಣಸಿಯ ವಿರಕ್ತ ಮಠದ ಪರಮ ಪೂಜ್ಯ ಶ್ರೀ ಡಾ.ಮಹಾಂತ ಮಹಾಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ಚವಿವ ಸಂಘದ ಆವರಣದಲ್ಲಿ ನಡೆದ ಡಾ. ಸಿ. ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದ “ಕುಲಿಗೋಡ ಉತ್ಸವ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ,

ಸ್ವಾತಂತ್ರ ಪೂರ್ವದಲ್ಲಿ ಬೇರೆ ಬೇರೆ ದೇಶದವರಿಂದ ಆವರಿಸಲ್ಪಟ್ಟ ಭಾರತ ಹಿಂದೆ ಪರಕೀಯರಿಂದ ದರಿದ್ರರ ನಾಡು ಎಂದು ಕೆರಯಲ್ಪಡುತ್ತಿತ್ತು. ಆದರೆ ಅದೆ ದರಿದ್ರರು ಇಂದು ಇಂಗ್ಲೆಂಡ್ ಸೇರಿದಂತೆ ಬೇರೆ ಬೇರೆ ದೇಶಗಳನ್ನು ಆಳುತಿದ್ದಾರೆ. ಭಾರತ ವಿಶ್ವಗುರು ಆಗುತ್ತಿದೆ. ನಮ್ಮ ರಾಷ್ಟ್ರ ಯಾವಾಗಲೂ ತಲೆ ಎತ್ತಿ ನಿಲ್ಲಬೇಕು. ಭಾರತವು ಅತಿ ಹೆಚ್ಚು ಯುವಕರನ್ನು ಹೊಂದಿದ ರಾಷ್ಟ್ರವಾಗಿದೆ ಅವರು ಮನಸ್ಸು ಮಾಡಿದರೆ ಇಡೀ ಜಗತ್ತನ್ನು ಗೆಲ್ಲಬಹುದು ಎಂದು ಯುವಕರಿಗೆ ಕರೆ ನೀಡಿದರು. ಅಷ್ಟೇ ಅಲ್ಲದೇ ಶಿಕ್ಷಣಕ್ಕೆ ಮಹಾತ್ಮ ಜ್ಯೋತಿಬಾ ಪುಲೆ ಅವರ ಕೊಡುಗೆ ಅಪಾರವಾಗಿದೆ ಎಂದು ಅವರ ತತ್ವಾದರ್ಶಗಳ ಬಗ್ಗೆ ತಿಳಿ ಹೆಳಿ, ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ರೂಡಿಸಿಕೊಂಡು ಉತ್ತಮ ಪ್ರಜೆಯಾಗಿರಿ ಎಂದು ಆಶೀರ್ವಚನದ ಮೂಲಕ ತಿಳಿ ಹೇಳಿದರು.

ಕಾರ್ಯಕ್ರಮ ಪ್ರಾರಂಭದಲ್ಲಿ ಪೂಜ್ಯರನ್ನು ಹಾಗೂ ಅತಿಥಿಗಳಿಗೆ ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿ, ನೇಗಿಲು ಪೂಜೆ ಮಾಡಿ ರೈತರ ದಿನಾಚರಣೆಯನ್ನು ಆಚರಿಸಿದರು.
ನಂತರ ಪದವಿ‌ಕಾಲೇಜಿನ ಸಿಬ್ಬಂದಿಯವರು ಪೂಜ್ಯರ ಪಾದಪೂಜೆ ಮಾಡಿ, ಗಣ್ಯರಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಸಹಾಯಕ ಲಕ್ಷ್ಮಣ ಮಾಳಗಿ ಅವರು ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ. ವ್ಹಿ ಎಸ್ ಮಾಳಿ ಹಾಗೂ ಪ್ರಕಾಶ ಆದಪ್ಪಗೊಳ ಸಭೆ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಡಾ. ಸಿ ಬಿ ಕುಲಿಗೋಡ ಪ್ರಾಸ್ತಾವಿಕವಾಗಿ ಮಾತನಾಡಿ ಬರುವ ಶೈಕ್ಷಣಿಕ ವರ್ಷದಿಂದ ಪಟ್ಟಣದ ಪದವಿ ಮಹಾವಿದ್ಯಾಲಯದಿಂದ ವಿಶ್ವ ವಿದ್ಯಾಲಯಕ್ಕೆ ಐಚ್ಛಿಕ ವಿಷಯಗಳಲ್ಲಿ ಒಟ್ಟಾರೆ ಫಲಿತಾಂಶದಲ್ಲಿ ರ್ಯಾಂಕ ಬಂದ ವಿದ್ಯಾರ್ಥಿಗಳಿಗೆ ತಲಾ 10000/- ಮತ್ತು ತಲಾ ಒಂದೊಂದು ಚಿನ್ನದ ಪದಕ ನೀಡಿ ಗೌರವಿಸುವುದಾಗಿ ಹೇಳಿದರು.

ನಂತರ ಕಾಮಿಡಿ ಕಿಲಾಡಿ ಖ್ಯಾತಿಯ ಚಿಲ್ಲರ ಮಂಜು ಹಾಗೂ ರಾಘವೇಂದ್ರ (ರಾಗಿಣಿ) ಅವರಿಂದ ಕಾಮಿಡಿ ಹಾಗೂ ಡಾ. ಸಿ.ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮವನ್ನು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಶ್ರೀ ಸಂಗಮೇಶ ಹಿರೇಮಠ ಹಾಗೂ ಐಕ್ಯೂಎಸಿ ಸಂಯೋಜಕ ರಾಜಶೇಖರ ಶೇಗುಣಸಿ ವಿಶೇಷ ರೀತಿಯಲ್ಲಿ ನಿರೂಪಿಸಿ, ಪ್ರಾಚಾರ್ಯ ಪ್ರಕಾಶ ಕಂಬಾರ ಸ್ವಾಗತಿಸಿ, ಕೆ. ಪಿ. ಹಾಲಳ್ಳಿ ವಂದಿಸಿದರು.



ಈ ಸಂದರ್ಭದಲ್ಲಿ ಸಾಹಿತಿ ಡಾ. ವ್ಹಿ ಎಸ್ ಮಾಳಿ, ಪ್ರಕಾಶ ಆದಪ್ಪಗೋಳ, ಪರಪ್ಪ ಖೇತಗೌಡರ, ಯಮನಪ್ಪ ಬಾಬಣ್ಣವರ, ಗೀರಿಗೌಡ ಪಾಟೀಲ, ಲಕ್ಷ್ಮಣ ಗೋಕಾಕ, ಯಮನಪ್ಪ ಬಾಬಣ್ಣವರ, ಮಹಾವೀರ ಕುರಾಡೆ, ಎಸ್‌ ಎಸ್ ಮದಾಳೆ, ಗುರು ಜಂಬಗಿ, ಪ್ರದೀಪ್ ನಾಯಿಕ, ವಿವೇಕ ಹುಂಡರಗಿ, ಪಿ.ಬಿ.ಕೊರವಿ, ಬಿ.ಎಸ್. ಸವಸುದ್ದಿ, ಎಚ.ಎಂ.ಕಂಕಣವಾಡಿ, ಸಂಗಣ್ಣ ತೇಲಿ ಕುಮಾರಿ ರತ್ನಾ ಖೆತಗೌಡರ, ಶೀವಲಿಲಾ ಪಾರ್ವತಿ, ಹುಸೇನ್ ಯಲಿಗಾರ, ಬಸವರಾಜ ಸಣ್ಣಕ್ಕಿ ಸೇರಿದಂತೆ ಪಟ್ಟಣದ ಮುಖಂಡರು ಹಾಗೂ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!