ಅಥಣಿಯಲ್ಲಿ ಡಾ. ಅಂಬೇಡ್ಕರ್ ರವರ ಜಯಂತಿ ಪೂರ್ವಭಾವಿ ಸಭೆ

Share the Post Now

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ಆಚರಣೆಯ ವಿಚಾರವಾಗಿ ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ಜರುಗಿತು,

ಈ ವೇಳೆ ಸಿಪಿಐ ರವೀಂದ್ರ ನಾಯ್ಕೋಡಿ ಮಾತನಾಡಿ ರಾಜ್ಯದಲ್ಲಿ 2023ರ ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಭೆ ಸಮಾರಂಭ ಜಾತ್ರೆಗಳನ್ನು ಸಾಮುದಾಯಿಕವಾಗಿ ಆಚರಣೆ ಮಾಡದಂತೆ ಮತ್ತು ನಿಯಮಾನುಸಾರವಾಗಿ ಆಚರಿಸುವಂತೆ ಸುತ್ತೋಲೆ ಹೊರಡಿಸಿದೆ ಆ ಸುತ್ತೋಲೆ ಪ್ರಕಾರ ಎಲ್ಲಾ ಗ್ರಾಮಗಳಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಗಳನ್ನು ಸರಳವಾಗಿ ಆಚರಣೆ ಮಾಡೋಣ. ಎಲ್ಲರೂ ಬಾಬಾಸಾಹೇಬರ ತತ್ವಗಳ ಸಿದ್ಧಾಂತಗಳನ್ನು ಪಾಲನೆ ಮಾಡಿಕೊಂಡು ಹೋಗಬೇಕೆ ಹೊರತು, ಡಾಲ್ಬಿ ಹಚ್ಚಿ ವಿಜೃಂಭಣೆ ಮಾಡಬಾರದು. ಜನರು ಮೆಚ್ಚವ ಹಾಗೆ ಜಯಂತಿ ಆಚರಣೆ ಮಾಡಬೇಕು. ಜಿಲ್ಲಾಡಳಿತ ಹೊರಡಿಸಿದ ಆದೇಶದ ಪ್ರಕಾರ ಯಾವುದೇ ಜಯಂತಿಯನ್ನು ಆಚರಣೆ ಮಾಡಬೇಕಾದರೆ ನಿಯಮಾನುಸಾರ ಆಚರಣೆ ಮಾಡಬೇಕು.ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಏಪ್ರಿಲ್ 18 ರ ಒಳಗಡೆ ಕಾರ್ಯಕ್ರಮ ಮುಗಿಸಿಕೊಳ್ಳಬೇಕು ಇಲ್ಲವಾದರೆ ಮೇ 13 ರ ನಂತರ ಪಾಲನೆ ಮಾಡಬೇಕು.ಇದಕ್ಕೆ ಎಲ್ಲರೂ ಅನುಮತಿ ಪಡೆದುಕೊಳ್ಳುವದು ಕಡ್ಡಾಯವಾಗಿದೆ. ರಾಜಕೀಯ ಚಟುವಟಿಟಿಗಳಿಗೆ ಅವಕಾಶ ನೀಡುವಂತಿಲ್ಲ. ಬಾಡೂಟ ಮಾಡಬಾರದು, ಅನುಮತಿ ಪಡೆಯದೇ ಜಯಂತಿ ಆಚರಣೆ ಮಾಡಿದರೆ ಕಠಿಣ ಕ್ರಮ ಜರುಗಿಸಬೇಕಾದ ಅನಿವಾರ್ಯತೆ ಬರುತ್ತದೆ ಎಂದರು. ಒಟ್ಟಾರೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಜನರಿಗೆ ಜಯಂತಿಗಳು ಸ್ಪೂರ್ತಿದಾಯಕವಾಗಬೇಕು ಎಂದರು.
ಏಪ್ರಿಲ್ 14 ರಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ ಎಂದರು. ಡಾಲ್ಬಿ ಸೌಂಡ ಸಿಸ್ಟಮ್ ಧ್ವನಿವರ್ಧಕ ಬಳಸದೆ ಆಚರಣೆ ಮಾಡಿ ಸಾಂಸ್ಕೃತಿಕ ಕಲೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಈ ವೇಳೆ ವಿವಿಧ ಗ್ರಾಮಗಳ ಮುಖಂಡರುಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಡೆಯುವ ದಿನಾಂಕ ಕಾರ್ಯಕ್ರಮಗಳ ಪಟ್ಟಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಜಯಂತಿಯ ರೂಪುರೇಷೆಗಳ ಬಗ್ಗೆ ಮಾತನಾಡಿದರು.

ಈ ವೇಳೆ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐ ಶಿವಶಂಕರ ಮುಕರಿ, ಹೆಚ್ಚುವರಿ ಪಿಎಸ್ಐಗಳಾದ ಚಂದ್ರಶೇಖರ ಸಾಗನೂರ, ಲಕ್ಷ್ಮೀ ಬಿರಾದಾರ, ಲಕ್ಷ್ಮಿ ದಿಡಗಿನಹಾಳ, ಸೇರಿದಂತೆ
ಮುಖಂಡರಾದ ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ, ಸುನಿಲ ವಾಘಮೊರೆ, ಶಶಿ ಬಾಡಗಿ, ರಾಮ ಮರಳೇರ, ಮಹಾಂತೇಶ ಬಾಡಗಿ, ಮಂಜು ಹೂಳಿಕಟ್ಟಿ, ಗೌತಮ ಪರಾಜಪೆ, ಶಿವಾನಂದ ಸೌದಾಗರ, ಅರುಣ ಮೇಲಗಡೆ, ಉದಯ ಅವಳೆ, ಸೇರಿದಂತೆ ಹಲವರು ಉಪಸ್ಥಿತರಿ

Leave a Comment

Your email address will not be published. Required fields are marked *

error: Content is protected !!