ವರದಿ :ಸಚಿನ ಕಾಂಬ್ಳೆ
ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ನಗರೋತ್ಥಾನ ೦೩ ನೇ ಹಂತದ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ್ ಚಾಲನೆ ನೀಡಿದರು.
ಈ ವೇಳೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಭಾಷ್ ಕುರಾಡೆ ಮಾತನಾಡಿ,ಉಗಾರ ಪಟ್ಟಣ ಬಸ್ ನಿಲ್ದಾಣದ ಸಮೀಪದಲ್ಲಿ ಡಾಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿಕೊಂಡರು.
ಸಮಸ್ಯೆ ಆಲಿಸಿ ಮಾತನಾಡಿ ಶಾಸಕ ಶ್ರೀಮಂತ ಪಾಟೀಲ್ ಅವರು,ಡಾ.ಬಾಬಾಸಾಹೇಬ ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಲ್ಲ ವರ್ಗಗಳಿಗೂ ಸೀಮಿತವಾದವರು.ಅವರ ಬರೆದ ಸಂವಿಧಾನದಿಂದ ಇವತ್ತೂ ನಾವೆಲ್ಲ ಸಮಾನತೆ,ಸಹೋದರ ತತ್ವ ಭಾವನೆಯಲ್ಲಿ ಬದುಕುತ್ತಿದ್ದೇವೆ ಅವರು ಇಲ್ಲದಿದ್ದರೆ ನಾವ್ಯಾರೂ ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ.ಅಂತಹ ಮಹಾನ್ ನಾಯಕರು ಪುತ್ಥಳಿ ನಿರ್ಮಾಣಕ್ಕೆ ನಾನು ಎಲ್ಲ ರೀತಿಯ ಸಹಾಯ ಸಹಕಾರ ನೀಡಿ ಎಲ್ಲರೂ ಸೇರಿಕೊಂಡು ಡಾ.ಬಾಬಾಸಾಹೇಬರ ಪುತ್ಥಳಿ ನಿರ್ಮಿಸೋಣ ಎಂದರು.
ಡಾ.ಬಾಬಾಸಾಹೇಬರು ನಮ್ಮ ದೇಶಕ್ಕಷ್ಟೇ ಸೀಮಿತವಾಗಿಲ್ಲ ವಿಶ್ವಕ್ಕೆ ಸೀಮಿತವಾದವರು.ಅವರು ಮಾಡಿರುವ ಸಾಧನೆ ದೇಶ ವಿದೇಶಗಳಲ್ಲಿ ರಾರಾಜಿಸುತ್ತಿವೆ ಎಂದು ಅಭಿಮಾನದ ಮಾತುಗಳನ್ನಾಡಿದರು.
