.
ಬೆಳಗಾವಿ : ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ನಿಗಮದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಹಾಗೂ ಹೂಗಾರ ಪದ ಕಡಿಮೆ ಮಾಡುವ ಕುರಿತು ಹಾಗೂ ನೀಲೂರು ಶ್ರೀ ನಿಂಬೆಕ್ಕ ದೇವಿಯ ದೇವಸ್ಥಾನ ಅಭಿವೃದ್ಧಿಯ ಕುರಿತು ಸನ್ಮಾನ್ಯ ಶ್ರೀ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯಾ ಅವರೊಂದಿಗೆ ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ.ಸಿ.ಬಿ.ಕುಲಗೋಡ ಅವರು ಚರ್ಚಿಸಿ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಹಾಗೂ ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ನಿಯೋಗ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.