ವರದಿ: ಸಂತೋಷ ಮುಗಳಿ
ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಕರ್ತೃ ಗದ್ದಿಗೆಯ ದರ್ಶನ ಪಡೆದ ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ;
ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಮುಗಳಖೋಡ ಪಟ್ಟಣದಲ್ಲಿರುವ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಕರ್ತೃ ಗದ್ದುಗೆಯ ದರ್ಶನ ಹಾಗೂ ಶ್ರೀಮಠದ ಪೀಠಾಧಿಪತಿ ಡಾಕ್ಟರ್ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮೀಜಿಗಳವರ ದರ್ಶನ ಆಶೀರ್ವಾದ ಪಡೆದ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ.
ರವಿವಾರ ಮಣ್ಣೆತ್ತಿನ ಅಮಾವಾಸ್ಯೆ ದಿನ ಮುಗಳಖೋಡ ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಮೂಲ ಕರ್ತೃ ಗದ್ದುಗೆಯ ವಿಶೇಷ ದರ್ಶನ ಪಡೆದ ಮಾಜಿ ಸಚಿವ ಹನುಮಂತಪ್ಪನವರು ಕರ್ತೃ ಗದ್ದಿಗೆಗೆ ವಿಷೇಶ ಪೂಜೆ ಸಲ್ಲಿಸಿ, ಫಲ ಪುಷ್ಪ ಹೂಹಣ್ಣು ಕಾಣಿಕೆ ನೀಡಿ ದರ್ಶನ ಪಡೆದರು. ಅರ್ಚಕರು ಮಾಜಿ ಸಚಿವರಿಗೆ ಬೆನ್ನಿಗೆ ಬೆತ್ತದ ಆಶೀರ್ವಾದ ನೀಡಿದರು.
ಶ್ರೀಮಠದ ಪೀಠಾಧಿಪತಿ ಡಾಕ್ಟರ್. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪನವರಿಗೆ ಶಾಲು ಮಾಲೆ ಹಾಕಿ ಗೌರವಿಸಿ ಆಶೀರ್ವದಿಸಿದರು. ಶ್ರೀಮಠದ ಮಹಾಮನೆಯಲ್ಲಿ ಮಾಜಿ ಸಚಿವ ಪಾಲ್ಕೋಡ ಹಣಮಂತಪ್ಪನವರು ಅಂಬಲಿ ಮಹಾ ಪ್ರಸಾದ ಸೇವಿಸಿದರು.
ನಂತರ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತ ಹಾಗೂ ಸಮುದಾಯದವರೊಂದಿಗೆ ಸುಮಾರು ಹೊತ್ತು ಸಮಯ ಕಳೆದು ಕುಶಲೊಪಹರಿಯಾಗಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ, ಪ್ರಥಮ ದರ್ಜೆಯ ಗುತ್ತಿಗೆದಾರ ಸಂಗಪ್ಪ ಮಾಯಣ್ಣವರ, ರೈತ ಮುಖಂಡ ಸುರೇಶ ಹೊಸಪೇಟಿ, ಶಿವಪ್ಪ ಮಾದರ, ಪಾಲಬಾವಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸದಾಶಿವ ಭಂಡಾರಿ, ಶ್ರೀಶೈಲ ಕಡಕೋಳ, ಕುಮಾರ ಹಳಕಲ್ಲ, ಬಸವರಾಜ ಮಾದರ, ಶಿವಾಜಿ ಮೇತ್ರಿ, ಬಸಪ್ಪ ಬುರಡಿ, ಸಂಗಪ್ಪ ಹಿಪ್ಪರಗಿ, ರಾಜು ಗಸ್ತಿ, ಖಣದಾಳ ಗ್ರಾಮ ಸದಸ್ಯ ಶ್ರೀಶೈಲ ಮಾಂಗ, ಕುಮಾರ ತೆಳಗಡೆ, ಕಾಮು ಅವಳೇ, ಸಮಾಜ ಸೇವಕಿ ರೂಪ ಗೋಕಾಕ, ದ್ರಾಕ್ಷಾಯಿಣಿ ಸಣದಿ, ಧ್ಯಾನಪ್ಪ ಮಲಬಾದಿ, ಹನುಮಂತ ಅರ್ಧಾಪುರ, ಮಾರುತಿ ಮಾದರ, ಶಿವಪ್ಪ ಸಂದ್ರಿಮಣಿ, ವಸಂತ ಚೌಡಕಿ, ಶ್ರೀಶೈಲ ಕುಂಬಾರ ಇತರರು ಇದ್ದರು.
=====================





