ಜೀವಿಸಲು ನೀರು, ಅಣ್ಣ ಎಷ್ಟು ಮುಖ್ಯವೋ ಪರಿಸರ ಸಂರಕ್ಷಣೆಯು ಅಷ್ಟೇ ಮುಖ್ಯ ಡಾ.ಲಕ್ಷ್ಮಣ ಚೌರಿ

Share the Post Now

ರಾಯಬಾಗ: ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಜಿತ ಬಾನೆ ಹಿರಿಯ ಪ್ರಾಥಮಿಕ ಶಾಲೆ, ಹೊಸ ಪ್ರೌಢ ಶಾಲೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ
ಜಾಗತಿಕ ಪರಿಸರ ದಿನಾಚರಣೆ ನಿಮಿತ್ಯ ಮಕ್ಕಳಿಗೆ ಸಸಿ ವಿತರಿಸಿ ಮಾತನಾಡಿ ಇವತ್ತಿನ ಆಧುನಿಕ ಜಗತ್ತಿನಲ್ಲಿ ಸದ್ದಿಲ್ಲದೆ ಬೆಳೆಯುತ್ತಿರುವ ನಗರೀಕರಣದಿಂದ ಗಿಡಮರ ಕಡೆಯುವುದು, ಹೆಚ್ಚುತ್ತಿರುವ ಕಾರ್ಖಾನೆಗಳು, ವಾಹನಗಳ ಹೊಗೆಯಿಂದ ಆಗುತ್ತಿರುವ ಭೂಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ ಹಾಗೂ ಇತರೆ ಮಾಲಿನ್ಯಗಳಿಂದ ಮನುಕುಲಕ್ಕೆ ಆತಂಕವನ್ನು ತಂದೊಡ್ಡಿದೆ ಆದ್ದರಿಂದ ಪ್ರತಿಯೊಬ್ಬರು ರಸ್ತೆಬದಿ, ಶಾಲೆಗಳಲ್ಲಿ, ಮನೆ ಮುಂದೆ ಸಸಿ ನೆಡುವ‌ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು.

ಮನುಷ್ಯ ಜೀವನವನ್ನು ಸಾಗಿಸಲು ನೀರು, ಅಣ್ಣ, ವಸತಿ ಎಷ್ಟು ಮುಖ್ಯವೋ ಪರಿಸರ ಸಂರಕ್ಷಣೆಯೂ ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.

ಈ ಸಮಯದಲ್ಲಿ ಮಕ್ಕಳ ಸಾಹಿತಿ ಡಾ. ಲಕ್ಷ್ಮಣ ಚೌರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಉಮೇಶ ದೇಶನೂರ, ಶಾಲೆಯ ಶಿಕ್ಷಕರೂ, ಮಕ್ಕಳು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

error: Content is protected !!