ಬೆಳಗಾವಿ :ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ. ಬಿ.ಆರ.ಅಂಬೇಡ್ಕರ ಸಂಸ್ಥೆಯ ಅಜೀತ ಬಾನೆ ಹಿರಿಯ ಪ್ರಾಥಮಿಕ ಶಾಲೆ ಹಮ್ಮಿಕೊಂಡ 9ನೇ ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಮಾತನಾಡಿದ ಡಾ.ಲಕ್ಷ್ಮಣ ಚೌರಿ ಇಡೀ ವರ್ಷದಲ್ಲಿ ರಾತ್ರಿ ಹಗಲು ಸಮನಾಗಿ ಇರುವ ವಿಶೇಷ ಇರುವ ದಿನ ಯಾವುದಾದರೆ ಇದ್ದರೆ ಅದು ಅಂತಾರಾಷ್ಟ್ರೀಯ ಯೋಗ ದಿನವಾಗಿದೆ. ಭಾರತ ಜಗತ್ತಿಗೆ ಯೋಗವನ್ನು ಬೆಳಕಾಗಿ ನೀಡಿರುವುದು ಹೆಮ್ಮೆಯ ವಿಷಯ ಸದೃಢ ದೇಹದಲ್ಲಿ ಸದೃಢ ಮನಸ್ಸು ಇರಲು ಸಾಧ್ಯ ಎಂಬಂತೆ, ನಾವು ನಮ್ಮ ಶರೀರವನ್ನು ಸದೃಢವಾಗಿ ಮಾಡಿಕೊಂಡಲ್ಲಿ ಮನಸ್ಸು ಕೂಡ ಸದೃಢವಾಗುತ್ತದೆ. ಮಕ್ಕಳು ಶಿಕ್ಷಣದ ಜೊತೆಗೆ, ನಿತ್ಯದ ಜೀವನದಲ್ಲಿ ಲವಲವಿಕೆಯಿಂದ ಇರಬೇಕಾದರೆ ಯೋಗವನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.

ಈ ಸಮಯದಲ್ಲಿ ಹೊಸ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಎ.ಎಸ.ಟೊಣ್ಣೆ, ಸಂಜೀವ ಬ್ಯಾಕುಡೆ, ರವೀಂದ್ರ ಭಾವಿ, ಕೋನೆ ಸರ, ಘಂಟಿ ಸರ, ನಾಗೂರ ಸರ, ಹೊನ್ನಾಕಟ್ಟಿ ಸರ, ಭಜಂತ್ರಿ ಸರ, ಶಿಕ್ಷಕರು ಶಿಕ್ಷಕಿಯರು, ನೂರಾರು ಮಕ್ಕಳು ಭಾಗಿಯಾಗಿದ್ದರು.





