ಬೆಳಗಾವಿ. ರಾಯಬಾಗ
ವರದಿ:ಡಾ.ಜಯವೀರ ಎ.ಕೆ
ರಾಯಬಾಗ: ತಾಲ್ಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಕನ್ನಡದ ಕಣ್ಮಣಿ ರಸಿಕರ ರಾಜ ಡಾ. ರಾಜಕುಮಾರ ಅವರ 94ನೇ ಜನ್ಮದಿನಾಚರಣೆ ಸಮಾರಂಭ ಇತ್ತೀಚೆಗೆ ನೆರವೇರಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಸಾoಸ್ಕೃತಿಕ ಪರಿಷತ್ತು ರಾಯಬಾಗ ತಾಲೂಕು ಘಟಕದ ಅಧ್ಯಕ್ಷರಾದ ಟಿ. ಎಸ್. ವಂಟಗೂಡಿ ಮಾತನಾಡಿ “ಬೇಡರ ಕಣ್ಣಪ್ಪ ಚಿತ್ರದಿಂದ ಶಬ್ದವೇದಿ ಚಿತ್ರದ ವರೆಗೆ ಅದ್ಬುತ ನಟನೆ ಮಾಡುವದರ ಮೂಲಕ ಕನ್ನಡ ಕಲಾ ರಸಿಕರ ಮನ ಗೆದ್ದ ರಸಿಕರ ರಾಜ ಡಾ. ರಾಜಕುಮಾರ ಅವರ ಕಲಾ ಸಿರಿವಂತಿಕೆ ವರ್ಣಿಸಲು ಅಸಾಧ್ಯ. ದ್ರುವತಾರೆ ಅದೇ ಕಣ್ಣು ಅಪೂರ್ವ ಸಂಗಮ ಜ್ವಾಲಾಮುಖಿ ಹಲವಾರು ಚಿತ್ರಗಳನ್ನು ಕಟ್ಟಿಕೊಡುವುದರ ಮೂಲಕ ಚಿತ್ರರಂಗದ ದ್ರುವತಾರೆ ಎನಿಸಿಕೊಂಡಿದ್ದಾರೆ. ಕಲಾಭಿಮಾನಿಗಳ ಮನದoಗಳದಲ್ಲಿ ಬಂಗಾರ ಮನುಷ್ಯನಾಗಿ ಹಾಗೂ ದೇವತಾ ಮನುಷ್ಯನಾಗಿ ಅಪಾರ ಅಭಿಮಾನಿಗಳ ದೇವರು ಡಾ. ರಾಜ ಅವರ ಚಿತ್ರರಂಗದ ಸೇವೆ ಶ್ಲಾಘನಿಯವಾದದ್ದು ಎಂದು ನುಡಿದರು. ಸಾಹಿತಿ ಶಿಕ್ಷಕ ಧರ್ಮರಾಜ್ ಕೋಳಿ ಪ್ರಾರ್ಥನಾ ಗೀತೆ ಹಾಡಿದರು. ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಸಂಘಟನಾ ಕಾರ್ಯದರ್ಶಿ ಕಲ್ಮೇಶ ಸತ್ತಿ ಡಾ. ರಾಜ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಬೀರಪ್ಪ ತಡಸಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ರಾಮು ವಂಟಗೂಡಿ ತೇಜಶ್ವಿನಿ ವಂಟಗೂಡಿ ಲಕ್ಷ್ಮೀ ಕಿರಣಗಿ ಉಪಸ್ಥಿತರಿದ್ದರು.ಜಡಿಸಿದ್ದ ವಂಟಗೂಡಿ ಸ್ವಾಗತಿಸಿದರು. ಬಸವರಾಜ ಸತ್ತಿ ನಿರೂಪಿಸಿದರು ವಿವೇಕ ವಂಟಗೂಡಿ ವಂದಿಸಿದರು.