ಬೆಳಗಾವಿ: ರವಿವಾರ ದಿನಾಂಕ 7 ರಂದು ಹೃದಯಾಘಾತದಿಂದ ನಿಧನರಾದ ಗೋಕಾಕ ಜೆ.ಎಸ್.ಎಸ್. ಪದವಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಬಿ.ಹೊಸಮನಿ ಅವರು ಸರಳ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು ಎಂದು ಹಿರಿಯ ಕನ್ನಡ ಪ್ರಾಧ್ಯಾಪಕರಾದ ಡಾ.ಅಶೋಕ ನರೋಡೆ ಹೇಳಿದರು
ರವಿವಾರ ಬೆಳಿಗ್ಗೆ ಬೆಳಗಾವಿ ನಗರದ ಭರತೇಶ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರ ಪರಿಷತ್ತು ಹಾಗೂ ಕೇಂದ್ರೀಯ ಕನ್ನಡ ಮೌಲ್ಯ ಮಾಪನ ವಿಭಾಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಮಿತಭಾಷಿಕರು ಸಕಲರಿಗೂ ಲೇಸನ್ನೇ ಬಯಸುತ್ತಿದ್ದ ಡಾ.ಹೊಸಮನಿ ಸಕಲ ಪ್ರಾಧ್ಯಾಪಕರ ಮನದಲ್ಲಿ ಒಳ್ಳೆಯ ಸ್ನೇಹ ಸಂಪಾದಿಸಿ ಗುರು ಹಿರಿಯರ ಪ್ರೀತಿ ಗಳಿಸಿದ ಪ್ರತಿಭಾವಂತ ಪ್ರಾಧ್ಯಾಪಕರಾಗಿದ್ದರು.ಅವರ ಅಕಾಲಿಕ ನಿಧನ ತುಂಬಲಾರದ ಬಹುದೊಡ್ಡ ನಷ್ಟ ಎಂದು ಡಾ.ನರೋಡೆ ಕಂಬನಿ ಮಿಡಿದರು.ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.ನೂರಾರು ಕನ್ನಡ ಮೌಲ್ಯ ಮಾಪಕರು ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಕನ್ನಡ ಪ್ರಾಧ್ಯಾಪಕರಾದ ಡಾ.ಸಂಗಮನಾಥ ಲೋಕಾಪುರ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
*ವರದಿ~ಡಾ.ಜಯವೀರ ಎ.ಕೆ*
*ಖೇಮಲಾಪುರ*