ಕೋಟಿ ಕೋಟಿ ಭಕ್ತರ ಉದ್ದಾರ, ಲೋಕ ಕಲ್ಯಾಣಕ್ಕಾಗಿ ಮಹಾ ಚಂಡಿಯಾಗ : ಡಾ.ಶ್ರೀ ಮುರುಘರಾಜೇಂದ್ರ ಶ್ರೀಗಳು

Share the Post Now


ನವರಾತ್ರಿ ವಿಶೇಷ ಮಹಾ ಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮ

ವರದಿ :ಸಂತೋಷ ಮುಗಳಿ

ಮುಗಳಖೋಡ:  ನವರಾತ್ರಿ ಹಬ್ಬದ ಪ್ರಯುಕ್ತ  ಆದಿಶಕ್ತಿ ನವದುರ್ಗೆಯ ಪ್ರತಿಷ್ಠಾನದ ಸಂದರ್ಭದಲ್ಲಿ ಮಹಾಚಂಡಿಯಾಗ ಮಾಡಿರುವುದು ಲೋಕ ಕಲ್ಯಾಣಕ್ಕಾಗಿ, ಕೋಟಿ ಕೋಟಿ ಭಕ್ತೋದ್ದಾರಕ್ಕಾಗಿ ಎಂದು ಶ್ರೀಮಠದ ಪೀಠಾದಿಪತಿ ಡಾ.ಶ್ರೀ ಮುರುಘರಾಜೇಂದ್ರ ಶ್ರೀಗಳು ಹೇಳಿದರು.

ಅವರು ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ನವರಾತ್ರಿ ಹಬ್ಬದ ನಿಮಿತ್ಯ ಶುಕ್ರವಾರದಂದು ನಡೆದ ಮಹಾಚಂಡಿಯಾಗದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಹಾಚಂಡಿಯಾಗಕ್ಕೆ  ಸಾವಿರಾರು ವರ್ಷಗಳ ಇತಿಹಾಸವಿದೆ. ಇದರಿಂದ ಆಧಿಶಕ್ತಿ ತೃಪ್ತಿಯಾಗುವಳು, ಈ ಯಾಗವನ್ನು ಸರ್ವರ ಉದ್ದಾರಕ್ಕಾಗಿ ಮಡಲಾಗುತ್ತದೆ. ಅದೆ ರೀತಿ ಶ್ರೀಮಠದಲ್ಲಿ ಚಂಡಿಯಾಗವು ಎಂಟು ದಿನಗಳ ಕಾಲ ನಡೆದು ಒಂಭತ್ತನೆ ದಿನ ಸುಮಾರು 54 ಪದಾರ್ಥಗಳಿಂದ ಚಂಡಿಯಾಗಕ್ಕೆ ಪುರ್ಣಾಹುತಿ ನೀಡಲಾಗಿದೆ. ಇದರ ಲಾಭ ಸಕಲರಿಗೂ ಆಗಲಿ ಎಂದು ಆಶೀರ್ವಚನ ನೀಡಿದರು.

ಮುತೈದೆಯರಿಗೆ ಬಾಗಿನ ನೀಡಿ, ನವಕಣ್ಯೆಯರ ಪೂಜೆ ಮಾಡಿ ಉಡಿತುಂಬಲಾಯಿತು.

ನಂತರ ಶ್ರೀಮಠದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಆದಿಶಕ್ತಿ ನವದುರ್ಗೆಗೆ ಬನ್ನಿ ಮತ್ತು ಪುಷ್ಪಗಳನ್ನು ದೇವಿಗೆ ಅರ್ಪಿಸಿದರು.
ಶ್ರೀಮಠದ ಅಪ್ಪಾಜಿ ಸಂಗೀತ ಬಳಗದ ಅಶೋಕ ಮನಗೂಳಿ ಹಾಗೂ ಸಹ ಕಲಾವಿದರಿಂದ ಸಂಗೀತ ಸೇವೆ ನಡೆಯಿತು.
ಕಾರ್ಯಕ್ರಮವನ್ನು ನ್ಯಾಯವಾದಿ ಸೋಮು ಹೊರಟ್ಟಿ ನೀರೂಪಿಸಿ ವಂದಿಸಿದರು

ಈ ಸಂದರ್ಭದಲ್ಲಿ ಬಿಜೆಪಿಯ ಚಿಕ್ಕೋಡಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ರಮೇಶ ಖೇತಗೌಡರ, ಶಶಿಕಾಂತ ಪಡಸಲಗಿ ಶ್ರೀಗಳು, ಪುರಸಭೆ ಸದಸ್ಯರಾದ ಅಗ್ರಾಣಿ ಶೇಗುಣಸಿ, ರಾಜು ನಾಯಿಕ, ಕೆಂಪಣ್ಣಾ ಅಂಗಡಿ, ಮಹಾಂತೇಶ ಯರಡತ್ತಿ, ಮಂಗಲಾ ಪಣದಿ, ಕಾಂಚನಾ ದೇಸಾಯಿ, ಅಣ್ಣಪೂರ್ಣಾ ಯರಡತ್ತಿ, ಸುರೇಖಾ  ವಿಜಯನಗರ, ಸುರೇಖಾ ಮಾಳಿಕಾರ, ಬಸವರಾಜ ಜೋಪಾಟಿ, ಮಾರುತಿ ಗೋಕಾಕ, ಮುತ್ತಪ್ಪ ಬಾಳೋಜಿ, ಸಿದ್ರಾಮ ಯರಡತ್ತಿ, ರಾಯಗೌಡ ಖೇತಗೌಡರ, ಮಹೇಶ ಸ್ವಾಮಿಜಿ ಹಾಗೂ ಶ್ರೀಮಠದ ಬಕ್ತರು ಇದ್ದರು.

Leave a Comment

Your email address will not be published. Required fields are marked *

error: Content is protected !!