ಬೆಳಗಾವಿ
ವರದಿ – ಸಿದ್ದಾರೋಢ ಬಣ್ಣದ
ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ ಡಾಕ್ಟರ್ ಬಸವರಾಜ ಬಿಸನಕೊಪ್ಪ..
ಖಾಕಿಗೆ ಬಾಯ್ ಹೇಳಿ ಖಾದಿಗೆ ಜೈ ಹೇಳಿದ ಡಾಕ್ಟರ್ ಬಸವರಾಜ ಬಿಸನಕೊಪ್ಪ ಇವರು ಮೂಲತಹ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದವರು. ಇವರ ತಂದೆ ಭೀಮಪ್ಪ. ತಾಯಿ ಸರೋಜನಿ ಇವರ ತಂದೆ ತಾಯಿಗೆ ಮೊದಲನೇಯ ಮಗನಾಗಿದ್ದು ಇವರಿಗೆ ಇಬ್ಬರು ಸಹೋದರಿಯರು ಕೂಡಾ ಇದ್ದರೆ. ಇವರು ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದವರಗಿದ್ದಾರೆ. ಇವರಿಗೆ ಜನರ ಸೇವೆ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಇವರ ಖಾಕಿ ಗೆ ಬಾಯ್ ಹೇಳಿದ್ದಾರೆ.
ಇವರು ವಿಜಯಪುರನಲ್ಲಿನ ಠಾಣೆಯೊಂದರಲ್ಲಿ ಸಿಪಿಐ ಹುದ್ದೆಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದರು ಆದರೆ ಜನಸೇವೆಯಲ್ಲಿ ತೊಡಗಲು ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ..





