ವರದಿ :ಸಂಜೀವ್ ಬ್ಯಾಕುಡೆ
ರಾಯಬಾಗ :ಬುಧವಾರ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಮ್ಮಿಕೊಂಡ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅತಿಥಿಯಾಗಿ ಬಂದು ಆಕ್ಯುಪ್ರೆಷರ್, ಆಸನಗಳು, ಪ್ರಾಣಾಯಾಮ ಸೇರಿ ಯೋಗದ ಮಹತ್ವವನ್ನು ಎಳೆಎಳೆಯಾಗಿ ತಿಳಿಸುವ ಮೂಲಕ ಕೆಲಕಾಲ ವಿದ್ಯಾರ್ಥಿಗಳು, ಹಾಗೂ ಪ್ರಾಧ್ಯಾಪಕರನ್ನು ಯೋಗದತ್ತ ಗಮನ ಸೆಳೆದು ಯೋಗಾಭ್ಯಾಸ ಮಾಡಿಸಿ ಮಾತನಾಡಿದ ಅವರು ಜಿಮಗೆ ಹೋಗಿ ಕಸರತ್ತು ಮಾಡುವುದು ಅದು ಒಂದೊಂದು ಭಾಗಕ್ಕೆ ಮಾತ್ರ ಗಮನ ಹರಿಸುವುದರಿಂದ ಸಂಪೂರ್ಣ ಶರೀರದ ಮೇಲೆ ಪ್ರಭಾವ ಬೀರದು ಆದರೆ ಯೋಗದಲ್ಲಿ ಆಸನಗಳ ಮೂಲಕ ದೇಹದ ಸದೃಢವಾಗಿಸಿದರೆ, ಪ್ರಾಣಾಯಮದಿಂದ ಉಸಿರಾಟದ ಮೇಲೆ ಗಮನ ಹರಿಸುವುದರಿಂದ ಮನಸ್ಸನ್ನು ನಿಯಂತ್ರಿಸಬಹುದಾಗಿದೆ.

ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಗರಿಮೆ ಭಾರತಕ್ಕೆ ಸಲ್ಲುತ್ತದೆ. ಯೋಗದಿಂದ ರೋಗವನ್ನು ದೂರ ಮಾಡಿ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಮನಸ್ಸು ಮತ್ತು ದೇಹವನ್ನು ಏಕಾಗ್ರತೆಯಿಂದ ಇಡುವ ಶಕ್ತಿ ಯೋಗಕ್ಕಿದೆ. ಹೀಗಾಗಿ ಇವತ್ತಿನ ಒತ್ತಡದ ಜೀವನಕ್ಕೆ ಯೋಗವು ಅತ್ಯಮೂಲ್ಯವಾಗಿದೆ.
ಈ ಸಂದರ್ಭದಲ್ಲಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಎ.ಎಸ.ಕಾಂಬಳೆ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಮ.ಎನ.ದಾಣನ್ನವರ, ದೈಹಿಕ ನಿರ್ದೇಶಕ ಆರ್.ಎಂ.ಮಹೇಶವಾಡಗಿ, ಪ್ರಾದ್ಯಾಪಕರಾದ ಎಂ.ಐ.ಜರ್ಮನ, ಎಂ.ಎಲ.ಖಜ್ಜಿಡೋಣಿ, ಡಾ.ಸುರೇಖಾ ಬೆಳಗಲಿ, ರೋಢಣ್ಣವರ, ಶಶಿಕಾಂತ ಕಲ್ಲೋಳ್ಕರ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಪ್ರೋ. ಶೋಭಾ ಕೊಕಟನೂರ ನಿರೂಪಿಸಿ ವಂದಿಸಿದರು.





