ಔಷಧ ವ್ಯಾಪಾರಿಗಳ ಒಳ ಜಗಳ,ಒಣ ಪ್ರತಿಷ್ಟೆ , ದುರಾಭಿಮಾನಗಳಿಂದ ಔಷಧ ವ್ಯಾಪಾರಿಗಳದ್ದು ಅಸಂಘಟಿತ ವಲಯವಾಗಿ ಬದಲಾಗುತ್ತಿದೆ ಎಂದು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಖೇದ ವ್ಯಕ್ತಪಡಿಸಿದ್ದಾರೆ.
ಗಂಗಾವತಿ ನಗರದ ಔಷಧೀಯ ಭವನದಲ್ಲಿ ಶನಿವಾರ ಔಷಧ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,ಔಷಧ ವ್ಯಾಪಾರಿಗಳ ಈ ವರ್ತನೆಯಿಂದ ಚೈನ್ ಸ್ಟೋರ್ಸಗಳ ಪ್ರಾಭಲ್ಯ ಹೆಚ್ಚಾಗಿದೆ.ಚಿಕ್ಕ-ಚಿಕ್ಕ ಔಷಧ ವ್ಯಾಪಾರಿಗಳ ವ್ಯಾಪಾರಕ್ಕೆ ಕುಂದು ಉಂಟಾಗಿ,ಕಷ್ಟದಲ್ಲಿ ಸಿಲುಕಿದ್ದಾರೆ.ಇಡೀ ದಿನ ವ್ಯಾಪಾರಕ್ಕಾಗಿ ಕಾಯ್ದು ಕುಳಿತುಕೊಳ್ಳುವ ಅನಿವಾರ್ಯತೆಯಿಂದಾಗಿ ಔಷಧ ವ್ಯಾಪಾರಿಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆಂದು ಕಳವಳ ಪಡಿಸಿದ್ದಾರೆ.
ರಾಜ್ಯದ ಇತರ ಜಿಲ್ಲೆ , ತಾಲೂಕುಗಳ ಔಷಧ ವ್ಯಾಪಾರಿಗಳನ್ನು ಗಮನಿಸಿದರೆ, ಕೊಪ್ಪಳ ಜಿಲ್ಲೆಯ ಔಷಧ ವ್ಯಾಪಾರಿಗಳಲ್ಲಿ ಬಹಳ ಜಾಗ್ರತೆ ಇದೆ ಎಂದು ಅಭಿಪ್ರಾಯ ಪಟ್ಟ ಅವರು,ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಮಾಮುಲು ಪಡೆಯುವ ಆತುರದಲ್ಲಿ ಕಾಯ್ದೆ-ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.ಈ ಪರಿಸ್ಥಿತಿ ಇಡೀ ರಾಜ್ಯದಲ್ಲಿಯೇ ಇದೆ. ಇಂತಹ ಸ್ಥಿತಿ ನಿರ್ಮಾಣವಾಗಲು ಅಧಿಕಾರಿಗಳು ಲಂಚ ಪಡೆಯುವುದೇ ಕಾರಣ ಎಂದು ನೇರವಾಗಿ ಅಪಾದಿಸಿದ್ದಾರೆ.
ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಹರಿಕೃಷ್ಣನ್ ಅವರ 62 ನೇ ಜನ್ಮ ದಿನವನ್ನು ಅವರ ಫ಼ೋಟೋ ಅನಾವರಣಗೊಳಿಸಿ,ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮದಲ್ಲಿ ಆಚರಿಸಲಾಯಿತು.
ಕೇವಾ ಆಯುರ್ವೇದ ಕಂಪನಿಯ ವಿಜಯಕ ಕುಮಾರ್ ಆಯುರ್ವೇದ ಔಷಧಗಳ ಮಾಹಿತಿ ನೀಡಿ,ಹೆಲ್ತ್ ಅನಲೈಜರ್ ಮೂಲಕ ಔಷಧ ವ್ಯಾಪಾರಿಗಳ ಆರೋಗ್ಯ ತಪಾಸಣೆ ಮಾಡಿದರು.ರಮೇಶ್ ಬಾಬು, ಶ್ರೀಮತಿ ಮಂಜುಳಾ ಹಾಗೂ ಶ್ರೀಮತಿ ಸಂಧ್ಯಾ ಪಾರ್ವತಿ ಉಪಸ್ಥಿತರಿದ್ದರು.
ಔಷಧ ವ್ಯಾಪಾರಿಗಳಲ್ಲಿ ಪ್ರಮುಖರಾದ ಮಂಜುನಾಥ ಸುಳೇಕಲ್ ಗಂಗಾವತಿ ,ಅಮರೇಶ ಅರಳಿ,ಕಾರಂಜಿ ವೀರಣ್ಣ , ಶ್ರೀನಿವಾಸ ಮತ್ತು ಮಂಜುನಾಥ ಹಿರೇಮಠ ಕಾರಟಗಿ ಮತ್ತಿತರರು ಹಾಜರಿದ್ದರು.
ಸುರೇಶ ಡಣಾಪೂರ,ಹನುಮನಗೌಡ ಬಸಾಪಟ್ಟಣ, ನವೀನ ಚವ್ಹಾಣ,ರಾಜಣ್ಣ ಭಾನಾಪೂರ,ರಘುನಾಥ ದರೋಜಿ,ಕಲ್ಯಾಣರಾವ್ ಇತರರು ಕಾರ್ಯಕ್ರಮವನ್ನು ನೆರವೇರಿಸಿದರು.





