ವರದಿ ಮುರಿಗೆಪ್ಪ ಮಾಲಗಾರ.
ಹಳ್ಳೂರ :ದ್ಯಾಮವ್ವ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರೆ ಮೇ 22 ರಂದು ಪ್ರಾರಂಭವಾಗುವ ಹಿನ್ನಲೆಯಲ್ಲಿ ಹಿಂದಿನ ಸಾಂಪ್ರದಾಯದ ಪ್ರಕಾರ ಬುಧವಾರ ಮುಂಜಾನೆ ದ್ಯಾಮವ್ವ ದೇವಿಗೆ ರುದ್ರಾಭಿಷೇಕ ವಿಶೇಷ ಪೂಜೆ ಉಡಿ ತುಂಬುವುದು ನೆರವೇರಿಸಿ ನಂತರ ಕಾಯಿ ಇಡುವ ಕಾರ್ಯಕ್ರಮ ಜರುಗಿತು.
ದ್ಯಾಮವ್ವ ದೇವಿ ಯವರನ್ನು ದೇವಸ್ಥಾನದಿಂದ ವಿವಿಧ ವಾದ್ಯ ಮೇಳದೊಂದಿಗೆ ದೇವಿಯನ್ನು ಸಿಮೊಂಗಲ (ಕಳಿಸುವ)ಕಾರ್ಯಕ್ರಮ ನಡೆದು ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರು ಅರ್ಚಕರು ಕೂಡಿಕೊಂಡು ದೇವಿಯನ್ನು ಶಿವಾಪೂರ ಹದ್ದಿನ ಅವರೆಗೆ ಹೋಗಿ ಕಳುಹಿಸಿ ಕೊಟ್ಟರು. ಹಿಂದಿನ ಸಾಂಪ್ರದಾಯದ ಪದ್ಧತಿ ಪ್ರಕಾರ ಬುಧವಾರದಿಂದ ಮೇ 21 ರ ವರೆಗೆ ಮದುವೆ, ಕಾಯಿ ಒಡೆಯುವುದು, ಹೊಸ ಮನೆ ಅಡಿ ಪಾಯ, ವಾಸ್ತು ಶಾಂತಿ ಸಮಾರಂಭ ದ್ಯಾಮವ್ವ, ಹಾಗೂ ಮಹಾಲಕ್ಷ್ಮೀ ದೇವಿಯ ಉಡಿ ತುಂಬುವುದು ಸಂಪೂರ್ಣ ನಿಷೇಧಿಸಲಾಗಿದೆ.
ಹೆಣ್ಮಕ್ಕಳನ್ನು ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಬಿಟ್ಟು ಬೇರೆ ಕಡೆ ಮದುವೆ ಮಾಡಬಹುದು. ಎಂದು 3 ಊರು ಹಿರಿಯರು ಕೂಡಿ ನಿರ್ಬಂಧ ಹೆರಲಾಗಿದೆ ಆದಕಾರಣ ಎಲ್ಲರೂ ಕಟ್ಟು ನಿಟ್ಟಾಗಿ ನಿಯಮವನ್ನು ಪಾಲಿಸಬೇಕು.
ಈ ಸಮಯದಲ್ಲಿ ಶ್ರೀ ರೇವಣಯ್ಯ ಹಿರೇಮಠ.ದ್ಯಾಮವ್ವ ದೇವಿ ಅರ್ಚಕರಾದ ಸೀದಗಿರಿ ಬಡಿಗೇರ.ಲಕ್ಷ್ಮಣ ಬಡಿಗೇರ. ದುಂಡಪ್ಪ ಬಡಿಗೇರ.ಗಿರೀಶ ಗೋಡಿಗೌಡರ.ಹಣಮಂತ ತೇರದಾಳ.ಬಸವಣ್ಣಿ ಡಬ್ಬಣ್ಣವರ.ಈರಯ್ಯ ಹಿಪ್ಪರಗಿ.ಮಾದೇವ ಹೊಸಟ್ಟಿ. ಸುರೇಶ ಕೌಜಲಗಿ. ಶಂಕರ ಗೌಡ ಪಾಟೀಲ. ಶಿವಬಸು ಜುಂಜರವಾಡ.ಮಲ್ಲಿಕಾರ್ಜುನ ಸಂತಿ. ಶಿವಪ್ಪ ಕೌಜಲಗಿ. ಶಿವನಗೌಡ ಪಾಟೀಲ.
ರಮೇಶ ಸವದಿ. ಕೆಂಪಣ್ಣ ಮುಧೋಳ. ಬಾಳಗೌಡ ಪಾಟೀಲ.ಸಿದ್ದಪ್ಪ ಕೂಲಿಗೋಡ. ಗುಳಪ್ಪ ನೇಸುರ. ಲಕ್ಷ್ಮಣ ಕೂಡಲಗಿ. ತುಕ್ಕಪ್ಪ ಪಾಟೀಲ. ಮಾದೇವ ನಾಯ್ಕ.ಅಡಿವೆಪ್ಪ ಪಾಲಬಾಂವಿ.ಮುರಿಗೆಪ್ಪ ಮಾಲಗಾರ. ಅಡಿವೆಪ್ಪ ಹಡಗೀನಾಳ. ಶ್ರೀಶೈಲ ಬಾಗೋಡಿ.ಮಲ್ಲಪ್ಪ ಹೊಸಟ್ಟಿ.ಮುತ್ತಪ್ಪ ಲಿಗಾಡಿ.ನವಲಪ್ಪ ಗೊಂಗಡಿ. ಮಾದೇವ ಅಟ್ಟಮಟ್ಟಿ.ಕಲ್ಲಪ್ಪ ಹುಬ್ಬಳ್ಳಿ.ಸೇರಿದಂತೆ ಹಳ್ಳೂರ ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರಿದ್ದರು.