ಬೆಳಗಾವಿ
ವರದಿ: ಶಶಿಕಾಂತ ಪುಂಡಿಪಲ್ಲೆ
ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬುಧವಾರ ವಿವಿಧ ಕಾಮಗಾರಿಗಳಿಗೆ ಶಾಸಕ ಮಹೇಶ ಕುಮಠಳ್ಳಿ ಚಾಲನೆ ನೀಡಿದರು.
ತಾಲೂಕಿನ ಶೇಗುಣಶಿ ಗ್ರಾಮದಲ್ಲಿ 17 ಲಕ್ಷ 75 ಸಾವಿರ ರೂಪಾಯಿ ವೆಚ್ಚದಲ್ಲಿ ಶೇಗುಣಶಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 1 ಕೊಠಡಿ ಕಾಮಗಾರಿ ಭೂಮಿ ಪೂಜೆ. 69 ಲಕ್ಷ ರೂ ವೆಚ್ಚದ ಶೇಗುಣಶಿ (ಕೂಡನಹಳ್ಳ)ದಲ್ಲಿ JJM ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ
ಬಳವಾಡ ಗ್ರಾಮದಲ್ಲಿ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದ JJM ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ. 14 ಲಕ್ಷ ರೂಪಾಯಿ ವೆಚ್ಚದ ಬಳವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 1 ಶಾಲಾ ಕೊಠಡಿ ಕಾಮಗಾರಿ ಭೂಮಿ ಪೂಜೆ.
24 ಲಕ್ಷ ರೂ ವೆಚ್ಚದ ಬಳವಾಡ ಗ್ರಾಮದ RC ಪ್ಲಾಟನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಕಾಮಗಾರಿ ಭೂಮಿ ಪೂಜೆ.
ಶಿರಹಟ್ಟಿ ಗ್ರಾಮದಲ್ಲಿ 16 ಲಕ್ಷ 40 ಸಾವಿರ ರೂ ವೆಚ್ಚದ ಶಿರಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 1 ಕೊಠಡಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ
ಈ ವೇಳೆ ಗುತ್ತಿಗೆದಾರರಾದ ಮುತ್ತಪ್ಪ ಜಮಖಂಡಿ,ಕುಮಾರ ಸತ್ತಿಗೌಡರ, ಕೃಷ್ಣಾ ಖೋತ, ಅಶೋಕ ಅಮನಿಗಿ, ಲಕ್ಷ್ಮಣ ಹಾಳಲ್ಲಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.