ಹಳ್ಳೂರ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ ಮಹಿಳೆಯರು ಸ್ವಾವಲಂಬನೆ ಸಮುದಾಯದ ಅಭಿವೃದ್ದಿ ಗುರಿಗಳನ್ನು ಸಾದಿಸುವುದೇ ಪ್ರಮುಖ ಉದ್ದೇಶವಾಗಿದೆಂದು ಶಿವಾಪೂರ ಅಡವಿ ಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಡವಿ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು
ಅವರು ಶಿವಾಪೂರ ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ಮಠದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಮೂಡಲಗಿ ವತಿಯಿಂದ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜಾ ಮತ್ತು ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜಾ ಮಾಡುವುದರಿಂದ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ.ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಬಡವರು ಜೀವನ ನಡೆಸಲು ಸಹಾಯ ಸಹಕಾರ ನೀಡುತ್ತಿದೆ ಬಡ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಸಧೃಡವಾಗಿ ಎಲ್ಲರೂ ಸಮಾಜದಲ್ಲಿ ಬದುಕಬೇಕು ತಗೆದುಕೊಂಡು ಸಾಲ ದುರುಪಯೋಗವಾಗದೆ ಸದುಪಯೋಗವಾಗಬೇಕು ಧರ್ಮಸ್ಥಳ ಸಂಸ್ಥೆ ಕಾರ್ಯ ಮೆಚ್ಚುವಂತಹದ್ದು ವೃದ್ಧರಿಗೆ ಅಂಗವಿಕಲರಿಗೆ ಮಾಸಾಸನ ನೀಡುತ್ತಿದ್ದಾರೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಣವನ್ನು ಪುಣ್ಯದ ಕಾರ್ಯಕ್ಕೆ ತೊಡಗಿಸುತ್ತಿದ್ದಾರೆ. ಇತ್ತಿಚಿಗೆ ಸಾಕಷ್ಟು ಜನ ಹಣದ ಆಸೆ ಮಾಡಿ ಸ್ವಾರ್ಥಿಗಳಾಗುತ್ತಿದ್ದಾರೆ ಶ್ರೀಮಂತಿಕೆ ಅಧಿಕಾರ ಶಾಶ್ವತಲ್ಲ ಆರೋಗ್ಯ ದಿಂದ ಇದ್ದು ನೆಮ್ಮದಿ ಜೀವನ ಸಾಗಿಸಿರೆಂದು ಹೇಳಿದರು.
ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಸಾಕಷ್ಟು ಉಪಯೋಗಗಳಿವೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಕನಸು ನನಸಾಗಬೇಕಾಗಿದೆ ಮೂಡಲಗಿ ತಾಲ್ಲೂಕಿನಲ್ಲಿ ಸದ್ಯ 100 ಕೋಟಿ ವ್ಯವಹಾರ ನಡೆಸುತ್ತಿದೆ ಧರ್ಮಸ್ಥಳ ಸಂಗದಿಂದ ಯಾವುದೆ ರೀತಿಯ ಸಾಲದ ರೂಪದಲ್ಲಿ ಹಣ ನೀಡುವುದಿಲ್ಲ ಮೂಡಲಗಿ ತಾಲ್ಲೂಕಿನಲ್ಲಿ ಮದ್ಯ ವರ್ಜನ ಶಿಬಿರ ನಡೆಸಿದ್ದಕ್ಕೆ 300 ಜನ ವ್ಯಸನದಿಂದ ಮುಕ್ತವಾಗಿ ಸುಖ ಜೀವನ ನಡೆಸುತ್ತಿದ್ದಾರೆಂದು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಮಾತನಾಡಿ ಧರ್ಮಸ್ಥಳ ಸಂಸ್ಥೆ ನಿಂತು ನಿರಲ್ಲ ನಿರಂತರ ಹರಿತಾಯಿದೆ ದೇವಸ್ಥಾನಗಳ ಜೀರ್ಣೋದ್ದಾರ, ಸಮುದಾಯ ಭವನ ಶಾಲಾ ಕಾಲೇಜು ಕಟ್ಟಡ ನಿರ್ಮಾಣ ಅನೇಕ ರೀತಿಯ ಸಮಾಜ ಉದ್ದಾರ ಮಾಡುವ ಕಾರ್ಯಗಳ ಜೊತೆಗೆ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜಾ, ಉಡಿ ತುಂಬುವವುದು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಸಂಸ್ಥೆ ಮಾಡದ ಕಾರ್ಯಗಳಿಲ್ಲ ಸರ್ವರೂ ನೆಮ್ಮದಿ ಜೀವನ ನಡೆಸುವ ಉದ್ದೇಶಯಿದಾಗಿದೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಂ ಪ ಉಪಾಧ್ಯಕ್ಷ ಮಲ್ಲಪ್ಪ ಜುಂಜರವಾಡ. ಪ್ರವೀಣಗೌಡ ಪಾಟೀಲ. ಉದಯಗೌಡ, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ವಿಶೇಷವಾಗಿ ವರ ಮಹಾಲಕ್ಷ್ಮೀ ಪೂಜೆ ನೆರವೇರಿಸಲಾಯಿತು.ಮಹಿಳೆಯರಿಗೆ ಉಡಿ ತುಂಬಿದರು.
ನಿವೃತ್ತಿ ಹೊಂದಿದ ನೀಲವ್ವ ಸೈದಾಪೂರ ಹಾಗೂ ಕಮಲವ್ವ ಕೌಜಲಗಿ ಅವರನ್ನು ಸನ್ಮಾನಿಸಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಮನವ್ವ ಗಿಡ್ಡವ್ವಗೋಳ.ಮುಖಂಡರಾದ ಯಮನಪ್ಪ ನಿಡೋಣಿ. ಅಶೋಕ ಗಾಣಿಗೇರ. ಕೌಸರ ಹಣಗಂಡಿ.
ಸೇವಾ ಪ್ರತಿನಿದಿಗಳಾದ ಮಾದೇವಿ ನಾವಿ.ಮಾದೇವಿ ಕುಂಬಾಳಿ ಮಾಲಾ ಮೇತ್ರಿ.ಕಸ್ತೂರಿ ಸವದಿ ಸೇರಿದಂತೆ ಸದಸ್ಯರು, ಸೇವಾ ಪ್ರತಿನಿಧಿಗಳಿದ್ದು
ಕಾರ್ಯಕ್ರಮವನ್ನು ವಿಜಯಲಕ್ಷ್ಮಿ ಮುರನಾಳ ಸ್ವಾಗತಿಸಿ, ರವಿ ಜಾಡಗೊಪ್ಪದ ನಿರೂಪಿಸಿ. ಯಾದನ ಗೌಡ ವಂದಿಸಿದರು.





