ಡೋರ ಸಮುದಾಯಕ್ಕೆ ನ್ಯಾಯ ಸಿಗದಿದ್ದರೆ ಚುನಾವಣೆಬಹಿಷ್ಕಾರ : ವಿನಾಯಕ ಪೋಳ್

Share the Post Now

ಬೆಳಗಾವಿ. ರಾಯಬಾಗ

ರಾಯಬಾಗ :ಕರ್ನಾಟಕದಾದ್ಯಂತ ಸುಮಾರು 15 ಲಕ್ಷಕ್ಕೂ ಅಧಿಕ
ಸಂಖ್ಯೆಯಲ್ಲಿರುವ ನಮ್ಮ ದಲಿತ ಎಡಗೈ ಸಮುದಾಯದ ಕುಲ
ಕಸುಬಾದ ಚರ್ಮಗಾರಿಕೆ ಉದ್ಯೋಗ ಮಾಡುತ್ತಾ
ಅಸ್ಪøಶ್ಯರಾಗಿಯೇ ಉಳಿದಿದ್ದು, ಮಾದಿಗ, ಸಮಗಾರ
ಜಾತಿಗಳೊಂದಿಗೆ ನಮ್ಮ ಡೋರ ಜಾತಿಯೂ ಇದೆ. ಆದಿ ಜಾಂಬವ
ಅಬಿವೃದ್ಧಿ ನಿಗಮದ ಹಾಗೂ ಲಿಡ್ಕರ ನಿಗಮದ ಅಡಿಯಲ್ಲಿ ಸೌಲಭ್ಯ
ಪಡೆಯುತ್ತಿದ್ದರು ಒಳಮೀಸಲಾತಿ ವರ್ಗೀಕರಣದ
ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಾಗ ದಲಿತ ಎಡಗೈ
ಸಮುದಾಯದ ಮಾದಿಗ ಮತ್ತು ಸಮಗಾರ
ಸಮುದಾಯವನ್ನು 1ನೇ ಗುಂಪಿನಲ್ಲಿ ಹೆಸರಿಸಿ 6ರಷ್ಟು ಮೀಸಲಾತಿ
ನೀಡಿ ನಮ್ಮ ಡೋರ ಸಮುದಾಯವನ್ನು ಅಲೆಮಾರಿ
ಜನಾಂಗವೆಂದು ಪರಿಗಣಿಸಿ 4ನೇ ಗುಂಪಿನ 89 ಜಾತಿಗಳೊಂದಿಗೆ ಸೇರಿಸಿ
ಕೇವಲ ಶೇಕಡಾ 1ರಷ್ಟು ಮೀಸಲಾತಿ ನಿಗದಿಪಡಿಸಿದ್ದು ಅತ್ಯಂತ
ಅನ್ಯಾಯವಾಗಿದೆ ಎಂದು ಸರ್ಕಾರದ ವಿರುದ್ದ ಸಮುದಾಯದ ಮುಖಂಡ ವಿನಾಯಕ ಪೋಳ
ಹರಿಹಾಯ್ದರು.
ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ ಠಾಣಾ
ಕಾರ್ಯಾಲಯದಲ್ಲಿ ಡಿಎಸ್ಪಿ ಶ್ರೀಪಾದ ಜಲ್ದೆಯವರಿಗೆ ಮನವಿ ಸಲ್ಲಿಸಿ
ಮಾತನಾಡಿದರು.
ಒಳಮೀಸಲಾತಿ ವರ್ಗೀಕರಣದಲ್ಲಿ ಆರ್ಥಿಕವಾಗಿ ಹಿಂದುಳಿದ
ಬಹುಸಂಖ್ಯಾತ ಡೋರ ಕಕ್ಕಯ್ಯ ಸಮುದಾಯವನ್ನು
ಅವೈಜ್ಞಾನಿಕವಾಗಿ 4ನೇ ಹಂತದಲ್ಲಿರಿಸಲಾಗಿದೆ. ಇದು ನಮ್ಮ
ಸಮೂದಾಯಕ್ಕಾದ ದೊಡ್ಡ ಅನ್ಯಾಯ ಎಂದು ಡೋರ
ಸಮೂದಾಯದ ಮುಖಂಡ ಹಾಗೂ ದಮನಿರತ ಸಂರಕ್ಷಣಾ
ಸಮಿತಿ ಅಧ್ಯಕ್ಷ ವಿನಾಯಕ ಪೋಳ ಅಸಮಾದಾನ
ವ್ಯಕ್ತಪಡಿಸಿದ್ದಾರೆ. ನಮ್ಮ ಸಮುದಾಯದ ಸ್ಥಿತಿಗತಿಗಳನ್ನು
ಕೂಲಂಕುಷವಾಗಿ ಪರಿಶೀಲಿಸಿ ಡೋರ ಸಮುದಾಯವನ್ನು 1ನೇ
ಗುಂಪಿನಲ್ಲಿರಿಸಿ ನಮ್ಮ ಸಮುದಾಯಕ್ಕೆ 6ರಷ್ಟು
ಒಳಮೀಸಲಾತಿಯಲ್ಲಿ ಅವಕಾಶ ಒದಗಿಸಬೇಕೆಂದು ಇಲ್ಲವಾದರೆ
ಮುಂಬರುವ ವಿಧಾನಸಭೆಯ ಚುನಾವಣೆಯನ್ನು ನಮ್ಮ
ಸಮುದಾಯವು ಮತದಾನ ಬಹಿಷ್ಕರಿಸುತ್ತೇವೆಂದು ಒತ್ತಾಯಿಸಿ
ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಹೇಶ ಐಹೊಳೆ, ಭಜರಂಗ
ಪೋಳ, ದೀಲಿಪ ಪೋಳ, ಧರ್ಮಾಜಿ ಕದಮ, ವಿಠ್ಠಲ ಪೋಳ,
ಅಜಯ ಮಾವರಕರ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!