ಹಳ್ಳೂರ
ದೇವಿ ಪುರಾಣವು ಕೆಲವು ವರ್ಷ ನಡೆಸದೆ ಭಕ್ತಿ ಭಾವದಿಂದ ಪ್ರತೀ ವರ್ಷ ನಡೆಸಬೇಕು 9 ದಿನಗಳಲ್ಲಿ ದೇವಿ ಪುರಾಣ, ಮಹಿಮೆಯನ್ನು ಮಹಾತ್ಮರು ಹೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನವು ಪಾವನವಾಗುತ್ತದೆಂದು ಅಂಕಲಗಿ ಅಮರ ಸಿದ್ಧೇಶ್ವರ ಸ್ವಾಮೀಜಿಯವರು ಹೇಳಿದರು.
ಅವರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯ ನಡೆದ ದೇವಿ ಪುರಾಣ ಕಾರ್ಯಕ್ರಮದ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ತಾಯಿ ತಂದೆ ಮನೆತನ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಬೆಳೆಸಿಕೊಂಡರೆ ಮಕ್ಕಳೂ ಕೂಡ ಸನ್ಮಾರ್ಗದಲ್ಲಿ ಸಾಗುತ್ತಾರೆ.ದೇವರನ್ನು ಭಕ್ತಿಯಿಂದ ಪೂಜಿಸಿ ದ್ಯಾನಿಸಿದರೆ ಸಕಲ ಸೌಭಾಗ್ಯಗಳು ದೊರೆಯುತ್ತವೆಂದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಸದಾಕಾಲ ನಡಿತಾಯಿರಬೇಕು. ಯುವಕರು ಜಾಗೃತರಾಗಿರಿ ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿರಿ ಒಳ್ಳೆ ಕೆಲಸ ಕಾರ್ಯ ಮಾಡಿ ಜೀವನ ರೂಪಿಸಿಕೊಳ್ಳಿರೆಂದು ಹೇಳಿದರು. ಕಪರಟ್ಟಿ ಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ ನವರಾತ್ರಿ ಉತ್ಸವ 9 ದಿನಗಳ ಕಾಲ ಯಶಸ್ವಿಯಾಗಿ ದೇವಿಯ ದಯೆಯಿಂದ ನಡೆಯಿತು ಪ್ರತೀ ವರ್ಷ ಎಲ್ಲರ ಸಹಕಾರ ದಿಂದ ಮುಂದುವರೆಸಿಕೊಂಡು ಹೋಗೋಣ ಎಂದು ಹೇಳಿದರು. ಪ್ರಾರಂಬದಲ್ಲಿ ಪೀರಸಾಭ ದೇವಸ್ಥಾನ ದರ್ಗಾ ದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರತಿ ಕುಂಭ ಮೇಳ ಮೆರವಣಿಗೆ ನಡೆಯಿತು. ಅದರಲ್ಲಿ ಹಿಂದೂ ಮುಸ್ಲಿಂ ಬಾವೈಕ್ಯತೆಯ ಮೆರಗು ಕಂಡು ಬಂದಿತು.
ಆನೇಕ ಮುದ್ದು ಮಕ್ಕಳು ದೇವಾದಿಗಳ ರೂಪದಲ್ಲಿ ವೇಷ ಭೂಷಣ ಧರಿಸಿದ್ದು ವಿಶೇಷ ಗಮನ ಸೆಳೆಯಿತು. ತಿಕೋಟಾದ ಶಿವಾನಂದ ಸ್ವಾಮೀಜಿಗಳು. ಶಾಸಕರ ಆಪ್ತ ಸಹಾಯಕ ಅಬ್ದುಲ ಮಿರ್ಜಾ ನಾಯಕ ಸೇರಿದಂತೆ ಹಳ್ಳೂರ, ಶಿವಾಪುರ, ಕಪ್ಪಲಗುದ್ದಿ ಗ್ರಾಮದ ಪಂಚಮ ಸಾಲಿ ಹಾಗೂ ತೋಟಗೆರ ದೈವದ ಸಮಾಜ ಬಾಂಧವರಿದ್ದರು. ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು.





