ಜಾತಿ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಹಿಂದು ಜಾತಿ ಕಾಲಂನಲ್ಲಿ ಮಾಳಿ, ಎಂದೇ ಬರೆಯಿಸಿ ಮುರಿಗೆಪ್ಪ ಮಾಲಗಾರ

Share the Post Now


ಬೆಳಗಾವಿ 20 ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ಕೇಂದ್ರ ಸರ್ಕಾರದ ಜನಗಣತಿಯು  ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು  ಸೋಮವಾರದಿಂದ ಪ್ರಾರವಾಗಲಿದೆ.ರಾಜ್ಯದ 31 ಜಿಲ್ಲೆಗಳಲ್ಲಿ ಮಾಳಿ,ಮಾಲಗಾರ  ಸಮಾಜ ಬಾಂಧವರೆಲ್ಲರೂ ಧರ್ಮದ ಕಾಲಂನಲ್ಲಿ  ಹಿಂದೂ ಅಂಥ ನಮೂದಿಸಿ, ಜಾತಿಯ ಕಾಲಂನಲ್ಲಿ ಮಾಳಿ .ಅಂತ ನಮೂದಿಸಬೇಕೆಂದು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ,ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರು ತಿಳಿಸಿದ್ದಾರೆ.


ಹಳ್ಳೂರ ಗ್ರಾಮದಲ್ಲಿ ಸಭೆ ನಡೆಸಿ ಮಾತನಾಡಿ ಸಮೀಕ್ಷೆದಾರರು ಮನೆಗೆ ಬಂದ ಸಮಯದಲ್ಲಿ  ಕುಟುಂಬದವರೆಲ್ಲ ತಮ್ಮ ಓಟಿಪಿ ಇರುವ ಆಧಾರ್ ಕಾರ್ಡ್   ರೇಷನ್ ಕಾರ್ಡ್ ತೋರಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರಕಾರದ ಮಾಲಿ,/ಮಾಳಿ ,  ಅಂತ ನಮೂದಿಸಿದರೆ 2 ಎ ಮೀಸಲಾತಿಯಲ್ಲಿ ಬರುತ್ತದೆ. ಮಾಳಿ, ಮಾಲಗಾರ ಬರೆಯಿಸುವುದರಿಂದ ಸಮಾಜದ ಜನಸಂಖ್ಯೆ 2 ಬಾಗವಾಗಿ ಕಡಿಮೆ ಸಂಖ್ಯೆ ತೋರಿಸುತ್ತದೆ.ಅದಕ್ಕಾಗಿ ಹಿಂದೂ ಮಾಳಿ ಒಂದೇ ಬರೇಯಿಸಿ ಎಂದು ಸಮಾಜದ ಮುಖಂಡರು ನಿರ್ಣಯಿಸಿದ್ದಾರೆ.ಲಿಂಗಾಯತ ಮಾಳಿ,  ನಮೂದಿಸಿದರೆ 3 ಬಿ ಗೆ ಸೇರುತ್ತದೆ. ಕಡ್ಡಾಯವಾಗಿ ಮಾಳಿ/  ಅಂತ ಬರೆಯಿಸಿರಿ
ಸಮೀಕ್ಷೆ ವೇಳೆಯಲ್ಲಿ 6 ವರ್ಷ ಮೇಲ್ಪಟ್ಟವರು ಒಟಿಪಿ ಇರುವ ಆಧಾರ ನಂಬರ ಪಡೆಯುವುದನ್ನು ಕಡ್ಡಾಯಗೊಳಿಸಿದ್ದಾರೆ.

ಈ ಸಮೀಕ್ಷೆ ಸಾಮಾಜಿಕ ಶೈಕ್ಷಣಿಕ ಉದ್ದೇಶಕ್ಕಾಗಿ ಸಮಾಜದ ನೈಜ ಸಂಖ್ಯೆ ತಿಳಿಯಲು ಇದೊಂದು ಸುವರ್ಣಾವಕಾಶ  ಸರಕಾರದ ಸೌಲಭ್ಯ ಪಡೆದುಕೊಳ್ಳುವ ನಮ್ಮ ಹಕ್ಕಿಗಾಗಿ ಜಾತಿ ಸಮೀಕ್ಷೆ ಕಾರ್ಯವಿದು ಆದ್ದರಿಂದ ಸಮಾಜ ಬಾಂದವರು ಸದುಪಯೋಗ ಪಡಿಸಿಕೊಳ್ಳಬೇಕು ನಮ್ಮ ಸಮಾಜಕ್ಕೆ ಅನ್ಯಾಯವಾಗದಂತೆ ಸಮಾಜದ ಸ್ಥಿತಿ- ಗತಿ ಮತ್ತು ನಿಖರ ಸಂಖ್ಯೆ ತಿಳಿಯುವ ಉದ್ದೇಶ ಇದಾಗಿದೆ.ರಾಜ್ಯದಲ್ಲಿ ವಿವಿಧ ನಾಮಾಂಕಿತವಾದ ಮಾಳಿ, ಮಾಲಗಾರ, ತೋಟಗೇರ, ತಿಗಳ ಇನ್ನೂ ಆನೇಕ ಹೆಸರುಗಳಿಂದ ಕರೆಯಲ್ಪಡುತ್ತಾರೆ ಕರ್ನಾಟಕದಲ್ಲಿ ಮಾಳಿ,

ಮಾಲಗಾರ ಸಮಾಜದವರು ಒಗ್ಗಟ್ಟು ತೋರಿಸಬೇಕಾಗಿದೆ. ಇದರಲ್ಲಿ ಮಕ್ಕಳ ಭವಿಷ್ಯವೂ ಅಡಗಿದೆ ಹಿಂದೆ ಸರಕಾರವು ಸಮೀಕ್ಷೆ ನಡೆಸಿ ಕೇವಲ 83296 ಸಾವಿರ ಜನಸಂಖ್ಯೆ ತೋರಿಸಿದ್ದಾರೆ. ರಾಜ್ಯದಲ್ಲಿ ಸುಮಾರು 25 ಲಕ್ಷದಿಂದ 30 ಲಕ್ಷ ಜನಸಂಖ್ಯೆಯಿದೆ ಎಂದು ತಿಳಿದು ಬಂದಿದೆ ಉಳಿದವರು ಎಲ್ಲಿ ಹೋದರೆಂದು ಗೊಂದಲವಿದೆ ಇನ್ನಾದರೂ ಸಮಾಜ ಬಾಂದವರು ಎಚ್ಚೆತ್ತುಕೊಳ್ಳಬೇಕಾಗಿದೆ 900 ವರ್ಷಗಳ ಹಿಂದಿನಿಂದಲೂ ಸಮಾಜವು ನಲುಗಿ ಹೋಗಿದೆ. ಈಗ ಬಂದಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಸಮಾಜದ ಮುಖಂಡರಾದ,ನಿಂಗಪ್ಪ ಸುಣದೋಳಿ.ಮಲ್ಲಪ್ಪ ಕೂಲಿಗೋಡ.ಶಿವಪ್ಪ ನಿಡೋಣಿ.ದುಂಡಪ್ಪಾ ಹೊಸಟ್ಟಿ.ಯಮನಪ್ಪ ನಿಡೋಣಿ. ಭೀಮಪ್ಪ ಹೊಸಟ್ಟಿ.ಸಿದ್ದಪ್ಪ ಕೂಲಿಗೋಡ.ಬಸಪ್ಪ ಗರಗ. ರಾಯಪ್ಪ ಕೂಲಿಗೋಡ .ಬಸಪ್ಪ ನೀಡೋಣಿ.ಹನಮಂತ ಮಾಲಗಾರ. ಯಲ್ಲಪ್ಪ ಕೂಲಿಗೋಡ.ಲಕ್ಷ್ಮಣ ಹೊಸಟ್ಟಿ.ಹನಮಂತ ಸುಣದೋಳಿ.ಬಸಪ್ಪ ನಿಡೋಣಿ.ಲಕ್ಷಣ ಕೂಲಿಗೋಡ.ಭೀಮಪ್ಪ ಗೋಸಬಾಳ.ದುಂಡಪ್ಪ ಕುಳ್ಳೋಳ್ಳಿ.ಸಂತೋಷ ಮಾಲಗಾರ.ರಾಮಪ್ಪ ಕೂಲಿಗೋಡ.ಶಿವಲಿಂಗ ಹೊಸಟ್ಟಿ ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!