ಬೆಳಗಾವಿ
ರಾಯಬಾಗ.ಮುಗಳಖೋಡ: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳವುದರಿoದ ದೈಹಿಕ , ಮಾನಸಿಕ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ . ಗ್ರಾಮೀಣ ಪ್ರತಿಭೆಗಳು ಅಂತರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು ಕ್ರೀಡೆ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹ ಅತ್ಯಗತ್ಯ ಎಂದು ಹಳಿಯಾಳದ ಮುರಾರ್ಜಿ ವಸತಿ ಶಾಲೆಯ ದೈಹಿಕ ಶಿಕ್ಷಕ ಎನ್ ಆರ್ ಹುಕ್ಕೇರಿ ಹೇಳಿದರು.

ಅವರು ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆ ಅಡಿ ನಡೆಸಲ್ಪಡುವ ಆದರ್ಶ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು .
ಹಂದಿಗುಂದದ ಅರುಣೋದಯ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಸ್ ಹಿರೇಮಠ ಮಾತನಾಡಿ, ಶಿಕ್ಷಕರ ಉತ್ತಮ ಮಾರ್ಗದರ್ಶನ, ತರಬೇತಿ ನೀಡಿದ್ದೆ ಆದರೆ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುತ್ತಾರೆ. ವಿದ್ಯಾರ್ಥಿಗಳು ವ್ಯಸನಿಗಳಾಗದೆ ಕಠಿಣ ತರಬೇತಿ, ತಾಳ್ಮೆ, ಸಂಯಮ ಇದ್ದರೆ ಕ್ರೀಡಾಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕ ಅಜಯ ತೇರದಾಳ ಅಧ್ಯಕ್ಷತೆ ವಹಿಸಿದ್ದರು.
ಹಾಕಿ ಮಾಂತ್ರಿಕ ಧ್ಯಾನ ಚಂದ ಅವರ ಭಾವಚಿತ್ರಕ್ಕೆ ರಾಮದುರ್ಗದ ವಿಶ್ವ ಭಾರತಿ ಪಿಯು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀಕಾಂತ ಖೇತಗೌಡರ ವಿಶೇಷ ಪೂಜೆ ಸಲ್ಲಿಸಿ ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ರಾಯಬಾಗ ತಾಲೂಕ ಮಟ್ಟದ ಸ್ಕೌಟ್ಸ್ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಸಿ ಎಸ್ ಹಿರೇಮಠ ಅವರಿಗೆ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆ ವತಿಯಿಂದ ಅಭಿನಂದನಾ ಪತ್ರ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಕಾಂತ ಖೇತಗೌಡರ, ಪತ್ರಕರ್ತ ಶ್ರೀಧರ ಪೂಜೇರಿ, ಶಿಕ್ಷಕರಾದ ಎ.ಎಸ್ ಕಾಂಬಳೆ ಎನ್. ಬಿ ತಹಶಿಲ್ದಾರ್ ವಿ ಬಿ ಕೊಣ್ಣೂರ , ಎಚ್.ಎಸ್ ಎಮ್ಮಿ , ಎಸ್ ಪಿ ಬಂಡಿಗಣಿ, ಬಿ.ಎ ದೇಸಾಯಿ, ಎಂ ಎಚ್ ಸಪ್ತ ಸಾಗರ, ಜೆ ಆರ್ ಕಳ್ಳಿಗುದ್ದಿ, ಎ .ಐ ಕೊಕಟನೂರ ಇದ್ದರು.
ಶಿಕ್ಷಕ ಎ.ಡಿ ಕೊಣ್ಣೂರ ಸ್ವಾಗತಿಸಿದರು. ಎ.ಎಸ್ ಗೋಕಾಕ ನಿರೂಪಿಸಿದರು. ಶಿಕ್ಷಕ ಆರ್ ಬಿ ಶೇಗುಣಿಸಿ ವಂದಿಸಿದರು.