ಬೆಳಗಾವಿ.ಕಾಗವಾಡ :~* ನೆರೆಯ ಕಾಗವಾಡ ತಾಲ್ಲೂಕು ಕೆ.ಎಲ್.ಇ. ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ಮಂಗಳವಾರ ದಿನಾಂಕ 20 ರಿಂದ ಸೋಮವಾರ ದಿನಾಂಕ 26 ರ ವರೆಗೆ ದತ್ತು ಗ್ರಾಮ ಪಕ್ಕದ ಇಂಗಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಮಂಗಳವಾರ ದಿನಾಂಕ 20 ರಂದು ಮಧ್ಯಾಹ್ನ 3.30 ಕ್ಕೆ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿಪತಿಗಳು, ಪರಮಪೂಜ್ಯ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಉದ್ಘಾಟಕರಾಗಿ ದಯಮಾಡಿಸಲಿದ್ದಾರೆ. ಇಂಗಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಂಜುಳಾ, ರಾಮಾ ಐಹೊಳ್ಳಿ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಲಿದ್ದಾರೆ.ಕೆ.ಎಲ್.ಇ. ಮಹಾವಿದ್ಯಾಲಯ ಶಿರಗುಪ್ಪಿಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಶಿವಾನಂದ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್ ಬಿ ಪಾಟೀಲ ಘನ ಅಧ್ಯಕ್ಷತೆ ವಹಿಸುವರು.7 ದಿನಗಳ ವರೆಗೆ ಶಿಬಿರಾರ್ಥಿಗಳಿಂದ ಶ್ರಮದಾನ, ಜಾಗ್ರತಿ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಗಳು ನಡೆಯಲಿವೆ. ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಾಧಕರಿಂದ ನಿತ್ಯ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. “ಜನಪದ ಸಾಹಿತ್ಯ ಮತ್ತು ಸಂಸ್ಕೃತಿ”, “ಮಾದಕ ವ್ಯಸನಗಳ ನಿರ್ಮೂಲನೆ ಬಗ್ಗೆ ಯುವಕರಿಗೆ ಜಾಗೃತಿ” “ಉಚಿತ ಕಣ್ಣು ಮತ್ತು ಎಲುಬು ಕೀಲುಗಳ ತಪಾಸಣಾ ಶಿಬಿರ” “ಸಾವಯುವ ಕೃಷಿ ಜಾಗೃತಿ” ಹಾಗೂ ಶಿಬಿರಾರ್ಥಿಗಳಿಂದ ಮನಮುದಗೊಳಿಸುವ ವೈವಿಧ್ಯಮಯ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.ಸೋಮವಾರ ದಿನಾಂಕ 26 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ,ಶಿಬಿರಾಧಿಕಾರಿ ಶ್ರೀ ಎಂ.ಎಸ್.ಕೌಲಗುಡ್ಡ,ಹಾಗೂ ಸಹಾಯಕ ಶಿಬಿರಾಧಿಕಾರಿ ಪ್ರೊ.ಎಲ್.ಎಸ್.ವಂಟಮೂರೆ ಪ್ರಕಟಣೆಯಲ್ಲಿ ತಿಳಿಸಿರುವರು
ವರದಿ:~ಡಾ ಜಯವೀರ ಎ.ಕೆ*.
*ಖೇಮಲಾಪುರ*





