ರಾಯಬಾಗ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಿ ಎಂ ಐಹೊಳೆ ಅವರು ಅಧಿವೇಶನದಲ್ಲಿ ಕಳೆದ ಬಹುದಿನಗಳಿಂದ ನೆನೆಗುದಿಗೆ ಬಿದ್ದಂತ ಮಾಳಿ ಸಮಾಜಕ್ಕೆ ಪ್ರತ್ಯೇಕ ನಿಗಮ ಮಾಡುತ್ತಿವೆಂದು ಕಳೆದ ಬಿಜೆಪಿ ಸರ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿ ಮಾಜಿ ಮುಖ್ಯಮಂತ್ರಿಗಳಾದ ಎಸ್ ಆರ್ ಬೊಮ್ಮಾಯಿ ಅವರು ರಾಯಬಾಗ ತಾಲೂಕಿನ ಮುಗುಳುಕೋಡದಲ್ಲಿ ನಡೆದ ರಾಜ್ಯಮಟ್ಟದ ಮಾಳಿ ಸಮಾಜದ ಸಭೆಯಲ್ಲಿ ಹೇಳಿದ್ದರು.
ಅಂದಿನಿಂದ ಇಂದಿನವರೆಗೂ ಈ ಸರ್ಕಾರದಲ್ಲಿ ಮಾಳಿ ಸಮಾಜದ ಬಗ್ಗೆ ಯಾರು ಶಾಸಕರು ಹಾಗೂ ಮಂತ್ರಿಗಳು ಇದರ ಬಗ್ಗೆ ಮಾತನಾಡುತ್ತಿಲ್ಲ ಆದರೆ ರಾಯಬಾಗದ ಶಾಸಕರಾದ ಡಿಎಂ ಐಹೊಳೆ ಅವರು ಅಧಿವೇಶನದಲ್ಲಿ ಮಾಳಿ ಸಮಾಜ ನಿಗಮ ಪ್ರತ್ಯೇಕವಾಗಿ ಆಗಬೇಕೆಂದು ಸಭಾಧ್ಯಕ್ಷರಲ್ಲಿ ಹಾಗೂ ಮುಖ್ಯಮಂತ್ರಿ ಅವರಲ್ಲಿ ಕೋರಿರುತ್ತಾರೆ. ಆದ್ದರಿಂದ ಕರ್ನಾಟಕ ಗಣ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಎಲ್ಲ ಸಚಿವರು ಕೂಡಿಕೊಂಡು ಆದಷ್ಟು ಬೇಗನೆ ನಿಗಮವನ್ನು ಮಾಡಬೇಕು ಎಂದು. ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷರಾದ ಡಾಾಕ್ಟರ್ ಸಿ ಬಿ ಕುಲಗುಡ ಹಾಗೂ.
ಕೌಜಲಗಿ ಮಾಳಿ ಸಮಾಜದ ಅಧ್ಯಕ್ಷರಾದ ನೀಲಪ್ಪ ಕಿವಟಿ ಸರ್ಕಾರವನ್ನು ಅಗ್ರಹಿಸಿದ್ದಾರೆ. ಹಾಗೂ ರಾಯ್ ಬಾಗದ ಶಾಸಕರಾದ ಡಿಎಂ ಐಹೊಳೆ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರಿತ್ತಾರೆ.ಈ ಸಂದರ್ಭದಲ್ಲಿ ಮಾಳಿ ಮಾಲಗಾರ ಸಮಾಜದ ಅಧ್ಯಕ್ಷರಾದ ಕಾಡು ಮಾಳಿ. ಮಾಳಿ ಸಮಾಜದ ನಿಯೋಗದ ಅಧ್ಯಕ್ಷರಾದ ಡಾ. ಸಿ ಬಿ ಕುಲಗೋಡ ಶಂಕರ್ ಕಿವಟಿ ಗಿರೀಶ್ ಭೂಟಾಳಿ ಪರಪ್ಪ ಲಗಳಿ ವಿಜಾಪುರ್ ಬಿಎಸ್ ಪಾಟೀಲ್ ಗುಲ್ಬರ್ಗ ನಿಂಗಪ್ಪ ಚಿಂಚಲಿ ಅಪ್ಪಾಸಾಹೇಬ್ ಕುಲಗೋಡೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಬೆಳಗಾವಿ ಈರಪ್ಪ ಬನ್ನೂರು ಮಹಾದೇವ್ ಹೊಸಟ್ಟಿ ಮಹಾದೇವ ತೇರದಾಳ್ ಅಶೋಕ್ ಹೆಗ್ಗನ್ನವರ್
ಸದಾನಂದ ಹೊಸಮನಿ ಗಿರೀಶ ಹಳ್ಳದಮಾಲ ಅಥಣಿ ಕಾಶಿನಾಥ್ ಮಾಳಿ ಚಿಕ್ಕೋಡಿ ಮಹಾದೇವ ಹೊಸಮನಿ ನಾರಾಯಣ ಮೇತ್ರಿ ಅಣ್ಣಾ ಸಾಹೇಬ್ ಕುಲಗುಡೆ ಹಾಗೂಎಲ್ಲ ಮಾಳಿ ಸಮಾಜದ ಮುಖಂಡರು ಕೂಡಿ ಬರುವ ಅಧಿವೇಶನದ ಒಳಗೆ ಮಾಳಿ ಸಮಾಜದ ನಿಗಮವನ್ನು ಪ್ರತ್ಯೇಕ ಮಾಡಿ ಕೊಡಲಿಲ್ಲವೆಂದರೆ ಚಳಿಗಾಲದ ಅಧಿವೇಶನದಲ್ಲಿ ಉಪವಾಸ ಸತ್ಯಾಗ್ರಹವನ್ನು ಎಲ್ಲ ಮುಖಂಡರು ಸೇರಿ ಹಮ್ಮಿಕೊಳ್ಳುತ್ತೇವೆ ಎಂದು ಡಾಕ್ಟರ್ ಸಿಬಿ .ಕುಲಗೂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






