ಪ್ರತಿದಿನ ಪರಿಸರ ದಿನವಾಗಬೇಕು: ಪ್ರೊ.ಶಿವಾನಂದ ಪಾಟೀಲ

Share the Post Now

ಬೆಳಗಾವಿ.ರಾಯಬಾಗ: ಪರಿಸರ ದಿನಾಚರಣೆಯಂದೇ ನಾವೆಲ್ಲರೂ ಪರಿಸರದ ಬಗ್ಗೆ ಕಾಳಜಿ ಮಾಡದೇ ಪ್ರತಿದಿನ ಪರಿಸರ ದಿನವಾಗಬೇಕು ಎಂದು ಪ್ರಾಚಾರ್ಯ ಪ್ರೊ.ಶಿವಾನಂದ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ದಿನಾಂಕ 5 ರಂದು ಪಕ್ಕದ ಕಾಗವಾಡ ತಾಲ್ಲೂಕು ಶಿರಗುಪ್ಪಿಯ ಪ್ರತಿಷ್ಠಿತ ಕೆ.ಎಲ್.ಇ. ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆವರಣ ದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಪರಿಸರ ಪ್ರಜ್ಞೆಯನ್ನು ಇಂದಿನ ಯುವ ಜನತೆಗೆ ವ್ಯಾಪಕವಾಗಿ ತಿಳುವಳಿಕೆ ಮೂಡಿಸಬೇಕಾಗಿದೆ.

ಒಂದು ಮರವನ್ನು ಮಗುವಿನಂತೆ ಕಾಳಜಿ ಮಾಡಬೇಕು.ನಮ್ಮ ನೆಮ್ಮದಿ ಆರೋಗ್ಯದ ಹಿತದೃಷ್ಟಿಯಿಂದ ಪರಿಸರವನ್ನು ಉಳಿಸಿ ಬೆಳೆಸೋಣ. ಎಂದು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಕಾಲೇಜಿನ ಸುತ್ತಮುತ್ತಲಿನ ಸಸಿಗಳಿಗೆ ಎನ್. ಎಸ್.ಎಸ್.ಘಟಕದ ಸ್ವಯಂ ಸೇವಕರು ನೀರುಣಿಸುವ ಮೂಲಕ ಪರಿಸರ ದಿನಾಚರಣೆಗೆ ಮೆರುಗು ನೀಡಿದರು. ಮಹಾವಿದ್ಯಾಲಯದ ಸಕಲ ಉಪನ್ಯಾಸಕರು ಉಪಸ್ಥಿತರಿದ್ದರು.ಘಟಕದ ಸಂಯೋಜನ ಅಧಿಕಾರಿಗಳಾದ ಪ್ರೊ.ಬಿ.ಆರ್.ನರವಾಡೆ ಸ್ವಾಗತಿಸಿದರು. ಪ್ರೊ.ಕೆ.ಎ.ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರೊ.ಆರ್.ಡಿ.ಪವಾರ ನಿರೂಪಿಸಿದರು.ಘಟಕದ ಸ್ವಯಂ ಸೇವಕಿ ಶ್ರೀದೇವಿ ಮೋರೆ ವಂದಿಸಿದರು.

ವರದಿ:~ಡಾ.ಜಯವೀರ ಎ.ಕೆ.*
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!