ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ:ಸಸಾಲಟ್ಟಿ

Share the Post Now

ಬೆಳಗಾವಿ.

ವರದಿ :ಸಚಿನ ಕಾಂಬಳೆ


ನಾಗನೂರ: ಸ.ಕ.ಹಿ.ಪ್ರಾ.ಶಾಲೆ,ನಾಗನೂರನಲ್ಲಿ ಸ್ವಾಮಿ ವಿವೇಕಾನಂದರ160 ನೇ ಜನ್ಮದಿನಾಚಾರಣೆಯನ್ನ ಎಲ್ಲ ಗುರುಗಳು ಮತ್ತು ಗುರುಮಾತೆಯರ ಸಮ್ಮುಖದಲ್ಲಿ ಆಚರಿಸಲಾಯಿತು.
ಸಹ ಶಿಕ್ಷಕರಾದ ಎಸ್.ಬಿ.ಹಿರೇಮಠ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಭಾರತದ ನಿರ್ಮಾಣಕ್ಕೆ ಕಾರಣವಾಗಬೇಕೆಂದು ವೇದಿಕೆಯ ಮೂಲಕ ಸಂದೇಶವನ್ನು ನೀಡಿದರು..
ಸ್ವಾಮಿ ವಿವೇಕಾನಂದ ಅವರ ಜೀವನ ಚರಿತ್ರೆ ಬಗ್ಗೆ ಅಧ್ಯಕ್ಷತೆಯ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಸಸಾಲಟ್ಟಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಲೆಯ ಪ್ರಧಾನ ಗುರುಗಳಾದ ಸಸಾಲಟ್ಟಿ ಸರ್, ಮುಖ್ಯ ಅತಿಥಿಗಳಾಗಿ ಶ್ರೀಮತಿ ಎನ್.ಆಯ್. ಕೋರಿ,ಪಿ.ಡಿ.ಅಳಗೋಡಿ, ಶ್ರೀಮತಿ ಕೆ.ಬಿ.ಪಾಸಪ್ಪಗೋಳ, ಶ್ರೀಮತಿ ಸರಸ್ವತಿ ಹೊಸಮನಿ, ಶ್ರೀಮತಿ ದೀಪಾ ಮಳಿವಡೇರ, ಪ್ರಭು ಯಾದಗುಡ, ಎಸ್.ಬಿ.ಹಿರೇಮಠ ಮತ್ತು ಶಿವು ಸರ್ವಿ ಇವರು ಭಾಗವಹಿಸಿದ್ದರು

ಶಾಲಾ ಸಿಬ್ಬಂದಿ ವರ್ಗ ಹಾಗೂ ಎಲ್ಲ ಮಕ್ಕಳು ಈ ಕಾರ್ಯಕ್ರಮಕ್ಕೆ ಹಾಜರಿದ್ದರು..

Leave a Comment

Your email address will not be published. Required fields are marked *

error: Content is protected !!