ಸತ್ಯಾ ನಾರಾಯಣನ್ನು ಎಲ್ಲರೂ ಶ್ರದ್ದಾ ಭಕ್ತಿಯಿಂದ ಪೂಜಿಸಿ

Share the Post Now

ಹಳ್ಳೂರ

ಸಾಮೂಹಿಕ ಸತ್ಯಾ ನಾರಾಯಣ ಪೂಜೆ ಮಾಡುವುದರಿಂದ ಮಳೆ, ಬೆಳೆ ಚೆನ್ನಾಗಿ ಆಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಬೇದ ಭಾವ ಮಾಡದೆ ಎಲ್ಲರೂ ಶ್ರದ್ದಾ ಭಕ್ತಿಯಿಂದ ಪೂಜಿಸಿ ಧ್ಯಾನಿಸಿದರೆ ಸಕಲ ಸೌಭಾಗ್ಯಗಳು ದೊರೆಯುತ್ತವೆ ಎಂದು ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಮುನ್ಯಾಳ ಗ್ರಾಮದ ಶ್ರೀ ಮರಡಿ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಮೂಡಲಗಿ ರೂರಲ್ ವಲಯದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಮೂಡಲಗಿ ಪ್ರಗತಿ ಬಿಂದು ಸ್ವ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಬಡತನ ನಿರ್ಮೂಲನೆ ಆಗಿ ಸಾಕಷ್ಟು ಕುಟುಂಬಗಳು ಸುಖ ಜೀವನ ನಡೆಸುತ್ತಿದ್ದಾರೆ.ಸತ್ಯನಾರಾಯಣದಂತ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಮೂಡಲಗಿ ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ. ಸಮುದಾಯ ಅಭಿವೃದ್ಧಿ ಕೆರೆ ನಿರ್ಮಾಣ. ಜಲ ಮಂಗಳ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸಲಕರಣೆ ನೀಡುವುದು. ಮಕ್ಕಳಿಗೆ ಸುಜ್ಞಾನನಿದಿ ಸ್ಕಾಲರ್ಶಿಪ್ ನೀಡುವುದು. ವಯಸ್ಸಾದವರಿಗೆ ಮಾಶಾಸನ ನೀಡುವುದು. ಅತ್ಸಲ್ಯ ಕಿಟ್ ನೀಡುವುದು. ಪ್ರತಿ ಗ್ರಾಮದ ಪ್ರಾಚೀನ ದೇವಸ್ಥಾನಗಳ ಜೀರ್ಣದ್ಧಾರಕ್ಕೇ ಸಹಾಯ,. ಮಧ್ಯ ವಸನಿಗಳಿಗೆ ಮಧ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತರನ್ನಾಗಿ ಮಾಡುವುದು ಸರ್ಕಾರದ ಸವಲತ್ತುಗಳು ಸುಲಭವಾಗಿ ಸಿಗುವಂತೆ ಗ್ರಾಮೀಣ ಪ್ರದೇಶದ ಜನರಿಗೆ ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಕೂಲ ಮಾಡಿಕೊಟ್ಟಿದೆ ಎಂದು ಮಾತನಾಡಿದರು. ಹಾಗೂ ಮುನ್ಯಾಳ ಗ್ರಾಮದ ಜನರ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಶೀಘ್ರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಮಾತನಾಡಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಮಹಿಳೆಯರು ಸಬಲೀಕರಣ ಹೊಂದಲಿಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾತ್ರ ಸಾದ್ಯ ಊರು ಊರುಗಳಲ್ಲಿ ಮಧ್ಯ ವ್ಯಸನ ಮುಕ್ತ ಮಾಡಲು ಉಚಿತ ಶಿಭಿರ ನಡೆಸಿ ಸಾರಾಯಿ ಕುಡಿಯುವುದನ್ನು ಬಿಡಿಸಿ ಸುಖ ಜೀವನ ನಡೆಸಲು ಸಹಕಾರಿಯಾಗಿ ಅನೇಕ ಕುಟುಂಬಗಳ ಬಾಳಿಗೆ ಬೆಳಕಾಗಿದ್ದು ಕಂಡು ಬರುತ್ತದೆ. ಈ ಸಂಗದಲ್ಲಿ ನೌಕರಿ ಮಾಡಿ ಕೂಡಾ ಸಾಕಷ್ಟು ಜನ ಸುಖ ಜೀವನ ನಡೆಸುತ್ತಿದ್ದಾರೆಂದು ಹೇಳಿದರು. ಗೋಪಾಲ ನಾಯಕ ಸರ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮುರಿಗೆಪ್ಪ ಮಾಲಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 2022/23 ಸಾಲಿನ ಏಸ್ ಏಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಹು ಆಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದೆ ಸಂದರ್ಬದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುರ್ಗವ್ವಾ ಜಂಬಗಿ. ಮಾಜಿ ತಾಲೂಕಾ ಪಂಚಾಯತ್ ಸದಸ್ಯರಾದ ಆನಂದರಾವ ನಾಯಕ. ವಲಯ ಮೇಲ್ವಚಾರಕಿ ರೇಣುಕಾ ತಿಳುವಳ್ಳಿ . ಪಿ ಡಿ ಓ ಏಸ್ ಬಿ ತಡಸನ್ನವರ. ಪ್ರಕಾಶ ಪಾಟೀಲ. ಚನ್ನಪ್ಪ ಮುದ್ದಾಪೂರ. ಮಲ್ಲಪ್ಪ ಮಧಿಹಳ್ಳಿ. ಬಸವರಾಜ್ ಗೋಡಿಗೌಡರ. ಮಡ್ಡೆಪ್ಪ ಒಡೆಯರ. ಪಾಂಡು ಬಂಗೆನ್ನವರ. ಎ ಎ ಪಿರಾಜಾದೆ.. ಸೇವಾ ಪ್ರತೀ ನಿಧಿ ರೇಣುಕಾ ಸನದಿ.ಈಶ್ವರ ಕೆಂಚರಡ್ಡಿ. ಆನಂದ ಕೆಂಚರಡ್ಡಿ. ಸೇರಿದಂತೆ ಸರ್ವ ಸದಸ್ಯರು ಗುರು ಹಿರಿಯರಿದ್ದು.ಕಾರ್ಯಕ್ರಮವನ್ನು ಸಿದ್ದಾರೂಢ ಬಡಿಗೇರ ನಿರೂಪಿಸಿ. ಕೆ ಎಚ್ ನಾಗರಾಜ ಸ್ವಾಗತಿಸಿ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!