ಬೆಳಗಾವಿ
ವರದಿ :ಸಂಗಮೇಶ ಹಿರೇಮಠ
ಮುಗಳಖೋಡ: ಸಾಮಾನ್ಯವಾಗಿ ಎಲ್ಲ ದೇವರಿಗೂ ವಿಶೇಷವಾಗಿ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿಯ ದಿನ ರಾತ್ರಿ ಹೊತ್ತು ಪೂಜೆ, ಭಜನೆ, ಕೀರ್ತನೆಗಳನ್ನು ನಡೆಸುವುದು ವಿಶೇಷ ಆಚರಣೆ ಈ ರಾತ್ರಿಯಾಗಿದೆ. ಅಂದರೆ ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನ ಕಳೆದು ಸುಜ್ಞಾನ ಮೂಡಿಸು ಎಂದು ಶಿವನಲ್ಲಿ ಬೇಡಿಕೊಳ್ಳುವ ಶುಭ ದಿನವೇ ಶಿವರಾತ್ರಿ.
ಅಜ್ಞಾನ ತುಂಬಿರುವಲ್ಲಿ ಈ ರಾತ್ರಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಿರುತ್ತಾನೆ. ಈ ಸಂದರ್ಭದಲ್ಲಿ ಭಕ್ತರಾದ ನಾವೆಲ್ಲ ಶಿವನ ಶ್ರೇಷ್ಠ ಮಂತ್ರವಾದ “ಓಂ ನಮಃ ಶಿವಾಯ” ಎಂಬ ಮಂತ್ರವನ್ನು ಪಠಿಸುತ್ತಾ ಶಿವನ ಧ್ಯಾನದಲ್ಲಿ ತೊಡಗಿಕೊಂಡರೆ ಕಷ್ಟಗಳು ದೂರವಾಗಿ ನಮ್ಮ ಇಷ್ಟಾರ್ಥಗಳು ಈಡೇರಿಸುವಲ್ಲಿ ಶಿವ ಸಾಕ್ಷಿಯಾಗುತ್ತಾನೆಂದು ಅಚಲೇರಿ-ಜಿಡಗಾ ಮಠದ ಪೀಠಾಧಿಪತಿ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಮುಗಳಖೋಡ ಪಟ್ಟಣದ ಶ್ರೀ ಈಶ್ವರಲಿಂಗೇಶ್ವರ ಹಿರೇಮಠದಲ್ಲಿ ಶಿವರಾತ್ರಿಯ ನಿಮಿತ್ಯ ಹಮ್ಮಿಕೊಂಡ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಶಿವನಿಗೆ ಅತಿ ಶ್ರೇಷ್ಠವಾದ ಬಿಲ್ವಪತ್ರೆಯನ್ನು ಅರ್ಪಿಸಿ ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಭಕ್ತಿಯಿಂದ ರಾತ್ರಿಯಿಡಿ ಜಾಗರಣೆ ಮಾಡುತ್ತಾ ಶಿವನ ಭಜನೆಯನ್ನು ಮಾಡಿದರೆ, ಒದಗಿರುವ ಕಷ್ಟಗಳು, ಸಕಲ ಪಾಪಗಳು ಕಳೆಯುತ್ತವೆ ಎಂದು ಹೇಳಿದರು.
ವಿಶೇಷ ಪೂಜೆಯಲ್ಲಿ ಭಾಗಿಯಾದ ಮಾಜಿ ಶಾಸಕ ಎಸ್.ಬಿ.ಘಾಟಗೆ:
ಮೊದಲು ಶೀತಿಲಾವಸ್ಥೆಯಲ್ಲಿದ್ದ ಈ ಈಶ್ವರಲಿಂಗೇಶ್ವರ ದೇವಸ್ಥಾನಕ್ಕೆ ೨೦೦೯ರಲ್ಲಿ ತಮ್ಮ ಅನುದಾನದಲ್ಲಿ ಅಭಿವೃದ್ಧಿಪಡಿಸಿದ ಮಾಜಿ ಶಾಸಕ ಎಸ.ಬಿ.ಘಾಟಗೆ ಅವರು ಮಹಾಶಿವರಾತ್ರಿ ಜಾಗರಣೆಯ ಪ್ರಯುಕ್ತ ಸುಕ್ಷೇತ್ರ ಮುಗಳಖೋಡ ಪಟ್ಟಣದ ವಾರ್ಡ್ ನಂಬರ್ ೨ರಲ್ಲಿರುವ ಐತಿಹಾಸಿಕ ಈಶ್ವರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಶಿವನ ಕೃಪೆಗೆ ಪಾತ್ರರಾದರು.
ಮುಂಜಾನೆ ೮ ಗಂಟೆಗೆ ಶ್ರೀ ಮಲ್ಲಿಕಾರ್ಜುನ ಹಿರೇಮಠ, ಸಚಿನ್ ಹಿರೇಮಠ ಇವರ ನೇತೃತ್ವದಲ್ಲಿ ಶ್ರೀ ಈಶ್ವರಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ, ಹೋಮ, ಹವನ ನೆರವೇರಿತು. ಸುಮಂಗಲೆಯರಿಗೆ ಉಡಿತುಂಬುವ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ನಂತರ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ಮುಪ್ಪಯ್ಯ ಹಿರೇಮಠ, ಅಲ್ಲಯ್ಯ ಹಿರೇಮಠ, ನಿವೃತ್ತ ಯೋಧ ಮುರುಗಯ್ಯ ಹಿರೇಮಠ, ಶ್ರೀಶೈಲ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ವಿಠ್ಠಲ ಯಡವನ್ನವರ, ಇರ್ಫಾನ್ ತರಡೆ, ರಮೇಶ ಯಡವನ್ನವರ, ಅಶೋಕ್ ಕೊಪ್ಪದ್, ರವಿ ಖೇತಗೌಡರ, ಅನಿಲ್ ಖೇತಗೌಡರ, ಹೊನ್ನಪ್ಪ ಹೊಸಪೇಟಿ, ಭೀಮರಾಯ ಖೇತಗೌಡ, ಮಲ್ಲಪ್ಪ ದಾಸಿಹಾಳ, ನಿವೃತ್ತ ಗುರುಗಳು ಬಿ.ಐ.ಹುಣಸಿಕಟ್ಟಿ, ರಾವಸಾಬ ಸರಿಕರ, ಶ್ರೀಕಾಂತ ಸಣ್ಣಕ್ಕಿನವರ, ಲಕ್ಷ್ಮಣ ಖೇತಗೌಡ, ಮಹಾದೇವ ಭಜಂತ್ರಿ, ಶ್ರೀಕಾಂತ ಖೇತಗೌಡ ಇತರರು ಇದ್ದರು.