ಬೆಳಗಾವಿ. ಅಥಣಿ
17.28 ಲೀಟರ್ ಮಹಾರಾಷ್ಟ್ರ ರಾಜ್ಯದ ದೇಶಿ ದಾರು ಸಂತ್ರಾ ಸಂಗ್ರಹಿಸಿದ ಸಮಯದಲ್ಲಿ ಅಬಕಾರಿ ಅಧಿಕಾರಿಗಳಿಂದ ದಾಳಿ
ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರಸ್ಥಾನ ಬೆಳಗಾವಿ ಹಾಗೂ ಜಂಟಿ ಆಯುಕ್ತರು ಬೆಳಗಾವಿ ವಿಭಾಗ, ಅಬಕಾರಿ ಉಪ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆ
ಮತ್ತು ಅಬಕಾರಿ ಉಪ ಅಧೀಕ್ಷಕರು, ಅಥಣಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ದಿ.02-04-2023 ರಂದು ರಾತ್ರಿ 10.30 ಗಂಟೆ ಸಮಯದಲ್ಲಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಅಬಾಸಾಹೇಬ ಬಾಳೇಶ ಚವ್ಹಾಣ ಈತನು ಅಕ್ರಮವಾಗಿ 17.28 ಲೀಟರ್ ಮಹಾರಾಷ್ಟ್ರ ದೇಶಿ ದಾರು ಸಂತ್ರಾ ಸಂಗ್ರಹಿಸಿದನು
ಆರೋಪಿಯನ್ನು ಬಂದಿಸಲು ಅಧಿಕಾರಿಗಳು ಹೋದಾಗ ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ
ಆರೋಪಿ ವಿರುದ್ಧ ಘೋರ ಪ್ರಕರಣವನ್ನು ದಾಖಲಾಗಿದ್ದು
ಮುದ್ದೆಮಾಲನ್ನು ಜಪ್ತು ಮಾಡಿ ಮಾನ್ಯ ನ್ಯಾಯಾಲಯಕ್ಕೆ ಪ್ರ.ವ.ವ ಸಲ್ಲಿಸಲಾಗಿದೆ