ಬೆಳಗಾವಿ
ಬಿಜೆಪಿ ರೋಡಶೋದಲ್ಲಿ ಯುವನಾಯಕ ಶ್ರೀನಿವಾಸ ಪಾಟೀಲ್ ಅವರನ್ನ ಮೂರು ಕಿಮೀ ಹೆಗಲಮೇಲೆ ಹೊತ್ತೊಯ್ದ ಅಭಿಮಾನಿಗಳು
ಕಾಗವಾಡ:೨೦೨೩ ರ ಚುನಾವಣಾ ಕುರಿತು ಐನಾಪೂರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ ಶೋ ದಲ್ಲಿ ರಾಜ್ಯದ ಸಚಿವರು, ಮಾಜಿ ಸಚಿವರು,ಹಾಲಿ ಶಾಸಕರು ಪಾಲ್ಗೊಂಡಿದ್ದ ಶೋದಲ್ಲಿ ಜನಸಾಗರ ಹರಿದು ಹರಿದಿತ್ತು ಆ ಸಮಯದಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಶ್ರೀನಿವಾಸ ಪಾಟೀಲ್ ಅವರನ್ನು ಅಭಿಮಾನಿಗಳ ತಂಡದಿಂದ ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು.ಇದು ನೆರೆದಿದ್ದ ಅಪಾರ ಜನಸ್ತೋಮದ ಕಣ್ಮನ ಸೆಳೆಯಿತು.
ಬಿಜೆಪಿ ಪಕ್ಷದ ರಾಜ್ಯದ ಅನೇಕ ನೇತಾರರು ಸೇರಿ ಕಾಗವಾಡ ವಿಧಾನಸಭಾ ಕ್ಷೇತ್ರದ ಗಡಿಭಾಗ ತಲುಪಿದ ನಂತರ ಶಿರಗುಪ್ಪಿ,ಉಗಾರ,ಐನಾಪೂರ ಗ್ರಾಮಕ್ಕೆ ವಿಜಯ ಸಂಕಲ್ಪ ಯಾತ್ರೆ ಬಂದು ತಲುಪಿತು. ಸುಮಾರು ಮೂರು ಕಿಮೀವರೆಗೆ ರೋಡಶೋ ನಡೆಯಿತು.ಅದರಲ್ಲಿ ಸಚಿವೆ ಶಶಿಕಲಾ ಜೊಲ್ಲೆ,ಮಾಜಿ ಸಚಿವ ರಮೇಶ್ ಜಾರಕಿಹೊಳಿ,ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,ಶಾಸಕ ಶ್ರೀಮಂತ ಪಾಟೀಲ್,ಸೇರಿದಂತೆ ಅನೇಕ ನೇತಾರರು ರ್ಯಾಲಿಯಲ್ಲಿ ಪಾಲ್ಗೊಂಡ ಅವರಿಗೆ ಅಭಿಮಾನಿಗಳು ಹೂವಿನ ಮಳೆ ಸುರಿಸಿ ಭವ್ಯ ಸ್ವಾಗತ ಕೋರಿದರು ಆನಂತರ ರ್ಯಾಲಿ ಪ್ರಾರಂಭಗೊಂಡಿತು.ರ್ಯಾಲಿ ಎದುರಿಗೆ ಶ್ರೀನಿವಾಸ ಪಾಟೀಲ್ ಅಭಿಮಾನಿ ಬಳಗದಿಂದ ಮೂರು ಕಿಮೀ ಅಂತರದವರೆಗೆ ಶ್ರೀನಿವಾಸ ಪಾಟೀಲ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದಿ ಕುಪ್ಪಳಿಸಿದರು.ರ್ಯಾಲಿಯಲ್ಲಿ ಜನ ಸಾಗರ ಹರಿದು ಬಂತು.
ಕ್ಷೇತ್ರದ ಗಡಿಭಾಗದಲ್ಲಿ ನೀರಾವರಿ ಯೋಜನೆ ವಿವಿಧ ಅಭಿವೃದ್ಧಿ ಯೋಜನೆ ಕಾಮಗಾರಿ ಮಾಡಿರುವ ಫಲವಾಗಿ ಈ ರ್ಯಾಲಿಯಲ್ಲಿ ಅನೇಕರು ಭಾಗವಹಿಸಿದ್ದರು.ಚುನಾವಣಾ ಮುಂಚಿತವಾಗಿ ಇದೊಂದು ಶುಭ ಸಂಕೇತದ ದೃಶ್ಯ ಕಂಡು ಬಂದಿತು.