ಬೆಳಗಾವಿ. ರಾಯಬಾಗ
🖊️Kareppa s kamble
ಬೆಳಗಾವಿ :ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ಜೈನ ಸಮುದಾಯ ಭವನದಲ್ಲಿ ಪುರಸಭೆಯ ಸನ್ 2022-23ನೇ ಸಾಲಿನ ಎಸ್ ಎಫ್ ಸಿ ಯ 21 ಲಕ್ಷ ರೂಗಳ ವಿಶೇಷ ಅನುದಾನದಲ್ಲಿ ಅಥಣಿ ಗೋಕಾಕ ಮುಖ್ಯ ರಸ್ತೆಯಿಂದ ಜೈನ ಸಮುದಾಯ ಭವನದವರೆಗೆ ಫೇವರ್ ಬ್ಲಾಕ್ ಅಳವಡಿಸುವ ಮತ್ತು ಪಟ್ಟಣ ಸಮೀಪದ ಕಟಕಬಾವಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಬೆಳಗಾವಿ ಏತ ನೀರಾವರಿ ಯೋಜನೆಯಡಿಯಲ್ಲಿ 35.52 ಕೋಟಿ ರೂಗಳ ಅನುದಾನದಲ್ಲಿ ರೈತರ ಜಮೀನುಗಳಿಗೆ ಜಾಗನೂರ ಹತ್ತಿರವಿರುವ ಹಿರೇಹಳ್ಳದಿಂದ ನೀರು ಹರಿಸುವ ಕಾಮಗಾರಿಗೆ ಕುಡಚಿ ಶಾಸಕ ಪಿ ರಾಜೀವ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಶಾಸಕ ಪಿ ರಾಜೀವ ಮಾತನಾಡಿ ರೈತರ ಬರಡು ಭೂಮಿಗೆ ನೀರು ಹರಿಸಿ ಬಂಗಾರದ ಬೆಳೆ ಬೆಳೆದು ರೈತರು ಸಮೃದ್ಧ ಜೀವನ ನಡೆಸುವಂತಾಗಬೇಕು ಎಂಬ ಸದುದ್ದೇಶದಿಂದ ಈ ಮಹತ್ವದ ಏತ ನೀರಾವರಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಂಡವಾಡ ವೀರಕ್ತ ಮಠದ ಗುರುಸಿದ್ದ ಸ್ವಾಮಿ, ಕಟಕಬಾವಿಯ ಅಭಿನವ ಧರೇಶ್ವರ ಸ್ವಾಮೀಜಿ, ಶಿವಗೊಂಡ ಧರ್ಮಟ್ಟಿ ಬಸನಗೌಡ ಆಸಂಗಿ, ಡಿ. ಸಿ. ಸದಲಗಿ, ದುಂಡಪ್ಪ ಹಾಡಕಾರ, ರಾಜು ಅಸ್ಕಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ನಿಂಗಪ್ಪ ಪಕಾಂಡೆ, ಪರಶುರಾಮ ಪಿಡಾಯಿ, ಮಹಾದೇವ ದೇಸಾಯಿ, ಭೀಮಪ್ಪ ಬಶೆಟ್ಟಿ, ಪುಂಡಲೀಕ ಕುರಬೆಟ್ಟ, ಬಾಳಪ್ಪ ಮಗದುಮ್ಮ, ರೇವಪ್ಪ ಮಾಳಿ, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.