ಸನ್ 2022-23 ನೇ ಸಾಲಿನ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಕಮರಿಯ ವಿದ್ಯಾರ್ಥಿನಿಯಾದ ಶ್ರೀನಿಧಿ ಶೀಳಿನ 580-96.66% ಅಂಕ ಗಳಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ, ಸನ್ಮತಿ ಬಿರಾದಾರ 574-95.66%, ಪರಮಾನಂದ ನಾವಿ 572-95.33%, ಶಾಂತವೀರ ಜನಗೌಡ 569-94.83%, ಪ್ರಶಾಂತ ಪೂಜಾರಿ 566-94.33% ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ. ಕಾಲೇಜಿನ ಒಟ್ಟಾರೆ ಫಲಿತಾಂಶ ಶೇ 82.16 ಎಂದು ಕಾಲೇಜಿನ ಪ್ರಾಚಾರ್ಯರಾದ ಸಂಗಮೇಶ ಬಸರಗಿ ತಿಳಿಸಿದ್ದಾರೆ.