ಉಚ್ಚ ನ್ಯಾಯಾಲಯದ ಆದೇಶದನ್ವಯ ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಬಾವಿ,ಕೆರೆ, ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವದನ್ನು ನಿಷೇಧಿಸಲಾಗಿದೆ. ಇಂತಹ ವಿಗ್ರಹಗಳನ್ನು ಮಾರಾಟ ಮಾಡುವರ ಹಾಗು ಪ್ರತಿಷ್ಠಾಪನೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಪಿ ಎಸ್ ಐ ಹಾಲಪ್ಪ ಬಾಲದಂಡಿ ಹೇಳಿದರು.
ಅವರು ಶನಿವಾರದಂದು ಹಳ್ಳೂರ ಗ್ರಾಮ ಪಂಚಾಯಿತಿಯಲ್ಲಿ ಗಣೇಶ ಹಬ್ಬದ ಮಂಡಳಿಗಳ ಸದಸ್ಯರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡುತ್ತಾ ಡಿಜೆ ಸೌಂಡದಿಂದ ಸಾರ್ವಜನಿಕರ
ಆರೋಗ್ಯದ ಮೇಲೆ ದುಷ್ಪರಿಣಾಮಗಳು ಜರುಗವುದರಿಂದ ನ್ಯಾಯಾಲಯವು
ಕೂಡಾ ಅದನ್ನು ಬಳಸದಂತೆ ಆದೇಶ ಮಾಡಿದೆ ಮಾಯಿಕ ಹಚ್ಚಿ ಭಕ್ತಿ ಗೀತೆ ಮದುರವಾದ ಸಂಗೀತ ನುಡಿಸುವ ಕಲಾವಿದರಿದ್ದು ಅವರಿಂದ ಕಲಾ ವಾದ್ಯಗಳನ್ನು ಗಣೇಶ ಮಂಟಪದಲ್ಲಿ ಬಳಕೆ ಮಾಡಬೇಕು ಅಶ್ಲೀಲ ಪದಗಳನ್ನು ಹಚ್ಚಬೇಡಿರಿ ಧಾರ್ಮಿಕ ಸಾಂಸಕೃತಿಕ ಕಾರ್ಯಕ್ರಮವನ್ನು ಹಚ್ಚಿ ಧರ್ಮವನ್ನು ರಕ್ಷಣೆ ಮಾಡಿರಿ.ರಸ್ತೆಯಲ್ಲಿ ನಿಂತು ದೇಣಿಗೆಯನ್ನು ಕೇಳುವಂತಿಲ್ಲ. ಗಣೇಶ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಪೋಲಿಸ್ ಸ್ಟೇಷನ್, ಪಂಚಾಯಿತ್, ಕೆ ಇ ಬಿ ಅನುಮತಿ ಪಡೆದುಕೊಳ್ಳಿರಿ. ಟ್ರ್ಯಾಕ್ಟರ್ ರೇಸ್ ಮಾಡುವುದು ನಿಯಮ ಬಾಹಿರವಾಗಿದೆ ಒಂದು ವೇಳೆ ನಿಯಮ ಉಲ್ಲಂಘಣೆ ಮಾಡಿದರೆ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ರಾಜ್ಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಆದಕಾರಣ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಬೈಕ ಓಡಿಸುವಾಗ ಮೊಬೈಲ ಬಳಸಬೇಡಿರಿ. ಫೇಸ್ಬುಕ್ ನಂತಹ ಅಂತರ್ಜಾಲಗಳಲ್ಲಿ ಫೆಕ್ ಮಾಡಿ ಆಧಾರ ಕಾರ್ಡ್ ನಂಬರ ಕೇಳಿದರೆ ಕೊಡಬೇಡಿ ಓ ಟಿ ಪಿ ಹೇಳಬೇಡಿರಿ. ಪರಿಚಯವಿಲ್ಲದವರನ್ನು ಫೇಸ್ಬುಕ್ ಟ್ವಿಟ್ಟರ್ ಜಾಲತಾಣಗಳಲ್ಲಿ ಫ್ರೆಂಡ್ಸ್ ಮಾಡಕೊಬೇಡಿರಿ ಹಾಗೂ ಸಂದೇಶ, ಫೋಟೊ ಕಳಿಸಬೇಡಿರಿ ಸಾಕಷ್ಟು ಜನ ಹಣದ ಆಸೆಗೆ ಹೀನ ಘಟನೆಗಳು ನಡೆಯುತ್ತಿವೆ ಜಾಗೃತರಾಗಿರೆಂದು ಯುವಕರಿಗೆ ತಿಳುವಳಿಕೆ ನೀಡಿದರು.
ಸಾರ್ವಜನಿಕ ಗಣೇಶ ಪೆಂಡಾಲಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಲು ವಿನಂತಿಸಿದರು, ಗಣೇಶ ಮಂಡಳಿಯ ಕಾರ್ಯಕರ್ತರ ಹೆಸರು ದೂರವಾಣಿ ಸಂಖ್ಯೆಗಳನ್ನು ನೀಡುವದು ಖಂಡಾಯವಾಗಿ ನೀಡಬೇಕು.
ಮಂಟಪದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಸೇರಿದಂತೆ ಹಲವು ಷರತ್ತುಗಳನ್ನು ಪಾಲಿಸಬೇಕು. ಆಯೋಜಕರು ಮೂರ್ತಿ ವಿಸರ್ಜನೆ ಮಾಡುವ ಸ್ಥಳ ಮತ್ತು ಸಾಗುವ ಮಾರ್ಗದ ಬಗ್ಗೆಯೂ ಠಾಣೆಗೆ ಮಾಹಿತಿ ನೀಡಬೇಕು.ಯಾವುದೇ ಕಾರಣಕ್ಕೂ ಮಾರ್ಗ ಬದಲಿಸುವಂತಿಲ್ಲ. ಹಳೆಯ ದ್ವೇಷದಿಂದ ಕಾನೂನು ಕೈಗೆ ಪಡೆದವರ ಮೇಲೆ ಗುಂಡಾ ಕಾಯ್ದೆಯಡಿ ಕೇಸು ದಾಖಲು ಮಾಡಲಾಗುವುದು ಶಾಂತಿಸೌಹಾರ್ದದಿಂದ ಹಬ್ಬ ಆಚರಿಸಿ.ಪಟಾಕ್ಷಿ ಹಚ್ಚುವಾಗ ಮಕ್ಕಳಿಗೆ ಹೆಂಗಸರಿಗೆ ತೊಂದರೆಯಾಗದಂತೆ ಆಚರಿಸಿ.ವೈಯಕ್ತಿಕ ಜಗಳನ್ನು ಹಬ್ಬದ ಮೇಲೆ ಹಾಕಬೇಡಿ ಎಂದರು. ಈ ಸಮಯದಲ್ಲಿ ಪೊಲೀಸ ಸಿಬ್ಬಂದಿಗಳಾದ ಏನ ಏಸ್ ಒಡೆಯರ. ಏಸ್ ಜಿ ಮಣ್ಣಾಪೂರ. ಪಿ ವಿ ಲೋಕುರೆ. ಕೆ ಟಿ ಚವ್ವಾನ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಮಲ್ಲಿಕಾರ್ಜುನ ಮಠಪತಿ. ಮುತ್ತಪ್ಪ ಲೋಕನ್ನವರ.ಮುತ್ತಪ್ಪ ಹೊಸಟ್ಟಿ.ಗೋವಿಂದ ಮಾದರ. ಸದಾಶಿವ ಹುಲಗಬಾಳಿ. ರಮೇಶ ಕುಳ್ಳೊಳ್ಳಿ. ರಾಜು ಅಂಗಡಿ. ರವೀಂದ್ರ ನುಚ್ಚುಂಡಿ. ಗುರು ಅಳಗುಂಡಿ. ಸುರೇಶ ಲಕ್ಷ್ಮೇಶ್ವರ. ಸತ್ತೆಪ್ಪ ಮೆಲಪ್ಪಗೊಳ. ಚಂದ್ರಕಾಂತ ನಿಡೋಣಿ. ಮಂಜು ಪೊಳ. ರೇವಪ್ಪ ಸಿಂಪಿ. ಸುರೇಶ ಬುತ್ತಪ್ಪಗೋಳ. ಇಶ್ವರ ಕಾಡಶೆಟ್ಟಿ. ಮಾದೇವ ಕಮಲದಿನ್ನಿ ಸೇರಿದಂತೆ ಇನ್ನಿತರಿದ್ದರು.