ಬೆಳಗಾವಿ :ಜಿಲ್ಲೆಯ ರಾಯಬಾಗತಾಲ್ಲೂಕಿನ ಹಾರೂಗೇರಿ ಪಟ್ಟಣದ ಸಮೀಪದ ಶ್ರೀ ಜ್ಞಾನೋದಯ ಪ್ರಾಥಮಿಕ ಹಾಗೂ ಶ್ರೀ ಜಿ ಬಿ ಪಾಟೀಲ ಪ್ರೌಢಶಾಲೆ ಹಾರೂಗೇರಿ ಕ್ರಾಸ್ ದಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ಜರುಗಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಮೂಡಲಗಿಯ ಆರ್. ಡಿ. ಎಸ್. ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ, ಸಾಹಿತಿ, ಶ್ರೀ ಟಿ. ಎಸ್ .ವಂಟಗೂಡಿ ಮಾತನಾಡಿ “ಇಂದಿನ ಯುವ ಪೀಳಿಗೆ ಮಾಧ್ಯಮಗಳ ಭರಾಟೆಯಲ್ಲಿ ಭಾರತ ದೇಶದ ಭವ್ಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೇವಲ ವಿದ್ಯಯೊಂದಿದ್ದರೆ ಸಾಲದು ಅದರ ಜೊತೆಗೆ ವಿನಯವೂ ಬೇಕು. ಮುಂದೆ ನಿರ್ದಿಷ್ಟ ಗುರಿ, ಹಿಂದೆ ಗುರು ಇರಬೇಕು. ಗುರಿ ಗುರು ವಿದ್ಯಾರ್ಥಿಗಳ ಎರಡು ಕಣ್ಣುಗಳಿದ್ದಂತೆ ಎಂದು ಮಾರ್ಮಿಕವಾಗಿ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಪ್ರಕಾಶಗೌಡ ಜಿ ಪಾಟೀಲ ವಹಿಸಿಕೊಂಡಿದ್ದರು. ತರಬೇತಿ ಶಿಬಿರದ ಮಾರ್ಗದರ್ಶಕರಾದ ಶ್ರೀ ಜಿ, ಬಿ, ಹೊನಗೌಡರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳು ಭರತನಾಟ್ಯ ಪ್ರಸ್ತುತಪಡಿಸಿದರು. ಹಾಗೂ ಅನಿಸಿಕೆ ಹಂಚಿಕೊಂಡರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವೇದಿಕೆ ಮೇಲೆ ಮುಖ್ಯೋಪಾದ್ಯಾಯರಾದ ಎಸ್ ಆರ್ ಪಾಟೀಲ ಶಿಕ್ಷಕಿ ಎಸ್ ಎಮ್ ಯರನಾಳ, ಎಮ್ ಡಿ ಹುನ್ನೂರ, .ವಿಜಯಕುಮಾರ ಕಂಬಾರ, ಅನಿಲ ಕಾಂಬಳೆ ಬಾಗಿರತಿ ನಾವಿ. ಎಂ ಎಸ್ ಯಳಗೂಡ, ಎಸ್ ,ಬಿ, ಟರ್ಕಿ, ರಾಮು ಚೌಗಲಾ ಉಪಸ್ಥಿತರಿದ್ದರು
ಎಂ ಡಿ ಹುನೂರ ಸ್ವಾಗತಿಸಿದರು. ಎಸ್ ಆರ್ ತೊದಲಬಾಗಿ ನಿರೂಪಿಸಿದರು. ಸವಿತಾ ಆರ್ ಬಿ ವಂದಿಸಿದರು.
ವರದಿ:~ಡಾ.ಜಯವೀರ ಎ.ಕೆ*
*ಖೇಮಲಾಪುರ*





