ಬೆಳಗಾವಿ.
ರಾಯಬಾಗ: ರಮೇಶ ಬಿನ್ ಅಂಕಯ್ಯ ಎಂಬ ವ್ಯಕ್ತಿಯು ಪರಿಶಿಷ್ಟ ಜಾತಿಗೆ ಸೇರದೇ ಇದ್ದರೂ ಆತ ಕಾನ್ಸ್ಟೇಬಲ್ ಆಗಿ ಸರಕಾರಿ ನೌಕರಿ ಮಾಡುತ್ತಿದ್ದು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸದರಿ ಆರೋಪಿಯ ವಿರುದ್ಧ ಪಿರ್ಯಾದೆ ನೀಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರು ನಗರ ಅಪರ್ ಸಿಟಿಸಿವಿಲ್ ಮತ್ತು ಸತ್ರ ನ್ಯಾಯಾಲಯ ಸರ್ಕಾರಕ್ಕೆ ಮತ್ತು ಪರಿಶಿಷ್ಟ ಜಾತಿಯವರಿಗೆ ಮೋಸ ಮಾಡಿದ್ದಾನೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದರ ಬಗ್ಗೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಾರ್ಹ ಸಂಗತಿ.
ಒಂದು ಕಾಲದಲ್ಲಿ ಮೇಲ್ವರ್ಗದವರು ಅಸ್ಪೃಶ್ಯರಾಗಿರುವ ಈ ಪರಿಶಿಷ್ಟ ಜಾತಿಯವರನ್ನು ಮುಟ್ಟಿದರೆ ಹಾಗೂ ಅವರು ನೆರಳು ನಮ್ಮ ಮೇಲೆ ಬಿದ್ದರೆ ಅಪವಿತ್ರ ಹಾಗೂ ಅಪಚಾರವಾಗುತ್ತದೆ ಎಂದು ತಿಳಿದುಕೊಂಡಿದ್ದರೋ ಅವರೇ ಈಗ ಸರಕಾರಿ ನೌಕರಿ ಪಡೆಯುವ ಉದ್ದೇಶದಿಂದ ಸರಕಾರಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿಯೋ ಅಥವಾ ಹಣಬಲದಿಂದ ವಾಮಮಾರ್ಗಗಳಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರಕಾರಿ ನೌಕರಿ ಮಾಡುತ್ತಿದ್ದ ಇಂಥವರಿಗೆ ಶಿಕ್ಷೆ ವಿಧಿಸಿದ್ದು ಸ್ವಾಗತಾರ್ಹ.ಕೇವಲ ಆರಕ್ಷಕ ಇಲಾಖೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇನ್ನೂ ಬೇರೆ ಬೇರೆ ಸರಕಾರಿ ಇಲಾಖೆಗಳಲ್ಲಿ ಅದೆಷ್ಟೋ ವ್ಯಕ್ತಿಗಳು ಸರಕಾರಕ್ಕೆ ಮಣ್ಣೆರಚಿ ಮೋಸ ವಂಚನೆ ಮಾಡಿ ಸರಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ ಎಂಬುದನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ಕೈಗೊಂಡು ಸೂಕ್ಷ್ಮವಾಗಿ ಪರಿಶೀಲಿಸಿ ಈ ಪ್ರಕರಣಗಳು ಭವಿಷ್ಯದಲ್ಲಿ ಮತ್ತೇ ಮರುಕಳಿಸದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.
ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*