ಬೆಳಗಾವಿ.ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಸೋಮವಾರ ಬೆಳಗ್ಗೆ 11.30ಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ.ಈಶ್ವರಪ್ಪ ಭೇಟಿ ನೀಡಲಿದ್ದಾರೆ.
ಹಿಂದುಳಿದವರು ದಲಿತರಿಗೆ ಒಂದು ಶಕ್ತಿಯಾಗಿ ಬರುವ ಫೆಬ್ರುವರಿ 04ರಂದು ಬಸವಣ ಬಾಗೇವಾಡಿಯಲ್ಲಿ ನೂರಾರು ಸ್ವಾಮಿಜಿಗಳ ನೇತೃತ್ವದಲ್ಲಿ ಒಂದು ಲಕ್ಷ ಜನರು ಭಾಗಿಯಾಗಲಿರುವ ಕ್ರಾಂತಿವೀರ ಬ್ರಿಗೇಡ್ ಮಹಾ ಸಮಾವೇಶದ ಪೂರ್ವ ಭಾವಿಯಾಗಿ ಸಭೆ ನಡೆಸಲು ಸೋಮವಾರ ಬೆಳಗ್ಗೆ ಮುಗಳಖೋಡದ ಯಲ್ಲಾಲಿಂಗ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು, ರಾಯಬಾಗ ಹಾಗೂ ಕುಡಚಿ ಪಟ್ಟಣಗಳಲ್ಲಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ಕ್ರಾಂತಿವೀರ ಬ್ರಿಗೇಡ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾರುತಿ ಹಳ್ಳೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.