ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ನಿಸರ್ಗಧಾಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಮೃಗಶಿರ ಮಳೆಯ ದಿನದಂದು ವಿಶೇಷವಾಗಿ ಸಿದ್ಧಪಡಿಸಿದ ನಾಟಿ ಆಯುರ್ವೇದ ಔಷಧ ವಿತರಣಾ ಕಾರ್ಯಕ್ರಮ ಅಂದರೆ ಬುಧವಾರ ದಿನಾಂಕ 7 ಮತ್ತು ಗುರುವಾರ ದಿನಾಂಕ 8 ರಂದು ಅಸ್ತಮಾ ಮತ್ತು ಅಲರ್ಜಿ ರೋಗಿಗಳಿಗೆ ಉಚಿತವಾಗಿ ಎರಡು ದಿನದ ಮಟ್ಟಿಗೆ ಮುಗಳಖೋಡ ಪಟ್ಟಣದಲ್ಲಿ ನಾಟಿ ವೈದ್ಯ ಶ್ರೀ ಅಲ್ಲಯ್ಯಾ ಸಿದ್ದಲಿಂಗಯ್ಯಾ ಹಿರೇಮಠ ಅವರು ಉಚಿತ ಔಷಧ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ರೋಗಗಳಿಗೆ ಔಷಧ ನೀಡಲಾಗುವುದು. ಆಸಕ್ತರು ಸಂಪರ್ಕಿಸಲು ಸಂಸ್ಥೆಯ ಕಾರ್ಯದರ್ಶಿ ಸಂಗಮೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಾಟಿವೈದ್ಯ ಅಲ್ಲಯ್ಯಾ ಸಿ ಹಿರೇಮಠ ಮುಗಳಖೋಡ. ತಾ ರಾಯಬಾಗ ಮೋ: 9611738779, 9611951633 ಇವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.





