ರೈತರ ವಿವಿಧ ಬೇಡಿಕೆಗಳ ಕುರಿತು ಹಸಿರು ಸೇನೆ ಹಾಗೂ ರೈತ ಸಂಘಟನೆಗಳಿಂದ
ಡಿ.7ರಂದು ಸುವರ್ಣ ಸೌಧದ ಎದುರು ಧರಣಿ..

Share the Post Now



ವರದಿ: ಸಂಗಮೇಶ ಹಿರೇಮಠ.

ಮುಗಳಖೋಡ: ರೈತರ ಹಲವಾರು ಬೇಡಿಕೆ ಕುರಿತು ಡಿ.7 ರಂದು ಸುವರ್ಣ ಸೌಧದ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಶಾಸಕರು ಹಾಗೂ ಎಲ್ಲ ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಕುರಿತು ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತ ಸಂಘದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅಂಗಡಿ ಹೇಳಿದರು.

ಅವರು ಮುಗಳಖೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ನಡೆಸುವ ಧರಣಿ ಪ್ರತಿಭಟನೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ರೈತರ ಸಾಲಮನ್ನಾ, ಬರಗಾಲ ಪರಿಹಾರ ಬಿಡುಗಡೆ, ಪ್ರತಿ ದಿನ ಪರಿಪೂರ್ಣ ವಿದ್ಯುತ್ ಪೂರೈಕೆ, ಅಕ್ರಮ ಸಕ್ರಮ ಐಪಿಎಸ್ ಸೆಟ್ ಗಳಿಗೆ ವಂತಿಗೆ ಹಣ ಪ್ರಾರಂಭ, ರೈತರ ಬೋರವೆಲ್, ಬಾವಿಗಳಿಗೆ ಟಿಸಿ ಅಳವಡಿಕೆ, ಕಬ್ಬಿಗೆ ಬೆಂಬಲ ಬೆಲೆ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ,
ರಾಯಬಾಗ ತಾಲೂಕಿನ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿಗೆ & ರೈತರ ಮಕ್ಕಳಿಗೆ ಸರಳ ಸಾಲ ಯೋಜನೆ ಸೇರಿದಂತೆ ರೈತರಿಗೆ ಇರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಆಲಿಸಿ ಅವುಗಳನ್ನು ಸುದೀರ್ಘವಾಗಿ ಚರ್ಚಿಸಿ, ರೈತರಿಗೆ ನ್ಯಾಯ ಒದಗಿಸಬೇಕು.

ಸದ್ಯ ರೈತರಿಗೆ ಇರುವ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 7ರಂದು ಗುರುವಾರ ಬೆಳಗಾವಿಯ ಸುವರ್ಣ ಸೌಧದ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ. ಎಲ್ಲ ರೈತ ಬಂಧುಗಳು ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಚಿಕ್ಕೋಡಿ ಜಿಲ್ಲಾ ಕಾರ್ಯಾಧ್ಯಕ್ಷ ವಿವೇಕಾನಂದ ಘಂಟಿ, ರಾಯಬಾಗ ತಾಲೂಕಾ ಅಧ್ಯಕ್ಷ ಮಹಾದೇವ ಹೋಳ್ಕರ,
ಮಾಯಪ್ಪ ಲೋಕುರೇ, ತಮ್ಮನ್ನಿ ಪಾಟೀಲ,ಸಿದ್ದಣ್ಣ ಅಂಗಡಿ,ಅಶೋಕ್ ಗಸ್ತಿ,ಅಪ್ಪುಗೌಡ ನಾಯಕ್,ಜ್ಞಾನೇಶ್ವರ್ ಅಳಗೋಡಿ,
ನಾಗಪ್ಪ ಅಂದಾನಿ,ಮಲ್ಲಪ್ಪ ಯರಗಾಣಿ,ಗುರುಪಾದ ಅಂಗಡಿ,ಹಾಲಪ್ಪ ಅಂಕಲಗಿ,ಭೀಮಸಿ ಅಳಗುಂಡಿ,
ಮಾರುತಿ ಅರಭಾವಿ,ಯಲ್ಲಪ್ಪ ಅಲಗುಂಡಿ,ಅಜ್ಜಪ್ಪ ಅಲಗುಂಡಿ,
ಸುನಿಲ್ ಕಂಬಾರ,ವಿಠ್ಠಲ ಮಾಂಗ,
ಅಶೋಕ್ ಭಜಂತ್ರಿ,ತಮ್ಮಾಣಿ ಪಾಟೀಲ್,ಲಕ್ಕಪ್ಪ ಮಸುಗುಪ್ಪಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!