ಗಂಗಾವತಿ:ವೈಜ್ಞಾನಿಕವಾಗಿ ವೃತ್ತಗಳನ್ನು ನಿರ್ಮಿಸಲು ಮನವಿ

Share the Post Now


ಗಂಗಾವತಿ: ನಗರದಲ್ಲಿನ ಹಲವು ವೃತ್ತಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.ರಸ್ತೆ ನಿಯಮಗಳ ಪ್ರಕರ ಎಡ ಭಾಗದಿಂದ ಬಲ ಭಾಗಕ್ಕೆ ವಾಹನಗಳು ತಿರುವುಗೊಳ್ಳಲು ಕಷ್ಟ ಸಾಧ್ಯವಾಗುತ್ತಿದೆ.ಆದ್ದರಿಂದ ಟಾಫ಼ಿಕ್ ಇಂಜಿನಿಯರ್ ಅವರ ಸಲಹೆಯಂತೆ ನಗರದಲ್ಲಿನ ಎಲ್ಲಾ ವೃತ್ತಗಳನ್ನು ಮರು ನಿರ್ಮಾಣ ಮಾಡಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ, ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರಲ್ಲಿ ಮಾಡಿದೆ.



ರಾಣಾ ಪ್ರತಾಪ್‌ ಸಿಂಗ್ ಸರ್ಕಲ್,
ಜುಲೈ ನಗರದ ಇಂದಿರಾ ಸರ್ಕಲ್,
ಸಿ.ಬಿ.ಎಸ್.ಸರ್ಕಲ್,
ಗಾಂಧೀ ಚೌಕ್,
ಮಹಾವೀರ ಚೌಕ,
ಬಸ್ ಸ್ಟ್ಯಾಂಡ್ ಹತ್ತಿರ ಶ್ರೀ ಕೃಷ್ಣ ದೇವರಾಯ ಸರ್ಕಲ್,
ಅಂಬೇಡ್ಕರ್ ಸರ್ಕಲ್
ನೀಲಕಂಠೇಶ್ವರ ಸರ್ಕಲ್,
ವಾಲ್ಮಿಕಿ ಸರ್ಕಲ್, ಸೇವಾಲಾಲ್ ಸರ್ಕಲ್
ಮುಂತಾದವುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು ಇವುಗಳು ಪುನರ್ ನಿರ್ಮಾಣವಾಗಬೇಕಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.

ಎಲ್ಲಾ ಸರ್ಕಲ್ ಗಳಲ್ಲಿ ವಾಹನಗಳು ಸುತ್ತು ಹಾಕಲು ಬಾರದಂತೆ ನಿರ್ಮಿಸಲಾಗಿದೆ.ಇದರಿಂದ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸಲು ವಿಫ಼ಲರಾಗುತ್ತಿದ್ದಾರೆ,ಇದರಿಂದ ಅಫ಼ಘಾತಗಳು ಉಂಟಾಗುವ ಸಾಧ್ಯತೆಗಳಿವೆ.

ಆದ್ದರಿಂದ ನಗರದಲ್ಲಿನ ಮೇಲೆ ಉಲ್ಲೇಖಿಸಿದ ಮತ್ತು ಇತರ ವೃತ್ತಗಳನ್ನು ತಜ್ಞರ ಸಲಹೆಯಂತೆ ಸ್ಥಳಾಂತರ ಗೊಳಿಸುವ ಅವಶ್ಯಕತೆ ಇದೆ ಎಂದವರು ಮನವರಿಕೆ ಮಾಡಿಕೊಟ್ಟಿದ್ದಾರೆ.

Leave a Comment

Your email address will not be published. Required fields are marked *

error: Content is protected !!