ಭಾರಿಪ್ರಮಾಣದಲ್ಲಿ ಗೋವಾ ಮಧ್ಯ ವಶ!

Share the Post Now

ಬೆಳಗಾವಿ

ವರದಿ -ರವಿ ಬಿ ಕಾಂಬಳೆ

ಗೋವಾದಿಂದ ಜಾಂಬೋಟಿ ಮಾರ್ಗದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಕಂಟೈನರ ಮೇಲೆ ಅಬಕಾರಿ ಇಲಾಖೆ ದಾಳಿ



ಬೆಳಗಾವಿ: ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಅಪರಾಧ), ಕೇಂದ್ರಸ್ಥಾನ ಬೆಳಗಾವಿ, ಶ್ರೀ, ಪಿರೋಜ್ ಖಾನ್ ಖಿಲ್ಲೇದಾರ, ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗರವರ ಆದೇಶದಂತೆ,

ಕು. ಎಂ. ವನಜಾಕ್ಷಿ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಶ್ರಿ, ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗರವರ ಮಾರ್ಗದರ್ಶನದಲ್ಲಿ

ಮುಂಬರುವ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ನಿಮಿತ್ಯ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾನಾಪೂರ ವಲಯ ವ್ಯಾಪ್ತಿಯ ಜಾಂಬೋಟಿ-ಖಾನಾಪೂರ ಎಸ್.ಎಚ್-31 ರಸ್ತೆಯ ಮೋದೆಕೊಪ್ಪ ಕ್ರಾಸ್ ಹತ್ತಿರ ಖಚಿತ ಮಾಹಿತಿ ಮೇರೆಗೆ ಮದ್ಯಾಹ್ನ 2:05 ಗಂಟೆಗೆ ಅಬಕಾರಿ ನಿರೀಕ್ಷಕರಾದ ಶ್ರೀ, ದಾವಲಸಾಬ ಶಿಂದೋಗಿ, ಅಬಕಾರಿ ಉಪ ನಿರೀಕ್ಷಕರಾದ ಶ್ರೀ, ಜಯರಾಮ ಜಿ. ಹೆಗಡೆ ಮತ್ತು ಸಿಬ್ಬಂದಿಯವರಾದ ಶ್ರೀ, ಮಂಜುನಾಥ ಬಳಗಪ್ಪನವರ, ಶ್ರೀ, ಪ್ರಕಾಶ ಡೋಣಿರವರು ಕೂಡಿಕೊಂಡು ರಸ್ತೆಗಾವಲು ಮಾಡುವ ಸಂದರ್ಭದಲ್ಲಿ ಒಂದು ಕಂದು ಬಣ್ಣದ ಭಾರತ ಬೆಂಜ್ ಗೂಡ್ಸ ಕ್ಯಾರಿಯರ್ 12 ಚಕ್ರದ ಕಂಟೆನರ್ ವಾಹನ ಸಂಖ್ಯೆ: ಜಿಜೆ-10/ಟಿಟಿ-8276ರಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ 180ಎಮ್.ಎಲ್. ಅಳತೆಯ 21696 ಇಂಪಿರಿಯಲ್ ಬ್ಲ್ಯೂ ವಿಸ್ಕಿ ಬಾಟಲಿಗಳನ್ನು (ಒಟ್ಟು 3905.28 ಲೀ. ಗೋವಾ ಮದ್ಯ) ಸಾಗಾಟ ಮಾಡುತ್ತಿದ್ದಾಗ ಶ್ರೀ, ದಾವಲಸಾಬ ಶಿಂದೋಗಿ, ಅಬಕಾರಿ ನಿರೀಕ್ಷಕರು, ಖಾನಾಪೂರ ವಲಯರವರು ಜಪ್ತು ಮಾಡಿಕೊಂಡು ಒಬ್ಬ ಆರೋಪಿತನನ್ನು ವಶಕ್ಕೆ ಪಡೆದು ಗುನ್ನೆ ಸಂಖ್ಯೆ: 17/2022-23, ದಿನಾಂಕ: 07/03/2023 ರಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನು ಸಲ್ಲಿಸಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಜಪ್ತಾದ ಮದ್ದ್ಯಮಾಲಿನ ಒಟ್ಟು ಅಂದಾಜು ಮೌಲ್ಯ ರೂ. 67,73,120/- ರಷ್ಟಿರುತ್ತದೆ.

Leave a Comment

Your email address will not be published. Required fields are marked *

error: Content is protected !!