ಹಳ್ಳೂರ .
ಗೋದಾವರಿ ಬೈಯೋರಿಪೈನರಿಸ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯು 2024-25 ನೇ ಸಾಲಿನಲ್ಲಿ ಎಷ್ಯಾ ಖಂಡದಲ್ಲಿಯೇ 147 ದಿನದಲ್ಲಿ ಅತೀ ಹೆಚ್ಚು ಕಬ್ಬು 24 ಲಕ್ಷ 65898 ಟನ್ ಕಬ್ಬು ನುರಿಸಿ ದಾಖಲೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆಂದು ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಹೇಳಿದರು.

ಅವರು ಶುಕ್ರವಾರ ದಂದು ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಗೊದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕಾರ್ಖಾನೆಯು ರೈತರ ಕಾರ್ಖಾನೆ ರೈತರ ಹಿತಾಶಕ್ತಿ ಕಾಪಾಡುವುದೇ ಮೂಲ ಉದ್ದೇಶವಾಗಿದೆ. ಕಾರ್ಖಾನೆ ಪ್ರಾರಂಭದಿಂದ
ಈ ವರ್ಷ ಅತೀ ಹೆಚ್ಚು ಟನ್ ಕಬ್ಬು ನುರಿಸಲು ಕಾರ್ಖಾನೆಯ ಮಾಲೀಕರಾದ ಸಮೀರಬಾಯಿ ಅವರ ಮಾರ್ಗದರ್ಶನವೇ ಕಾರಣ. ಎಷ್ಯಾ ದಲ್ಲಿಯೇ ನಮ್ಮ ಕಾರ್ಖಾನೆ ಹೆಚ್ಚು ಕಬ್ಬು ನುರಿಸಲು ಸಹಕರಿಸಿದ ರೈತ ಬಾಂದವರು, ಕಾರ್ಮಿಕರು, ಆಡಳಿತ ಮಂಡಳಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮುಂಬರುವ ಸಾಲಿನಲ್ಲಿ ಇನ್ನು ಹೆಚ್ಚು ಕಬ್ಬು ನುರಿಸಲು ಸಹಕರಿಸಿ ಕಾರ್ಖಾನೆಯ ಶ್ರೇಯೋಭಿವೃದ್ದಿಗೆ ಕೈ ಜೋಡಿಸೋಣ ವೆಂದು ಹೇಳಿದರು.
ಕಾರ್ಖಾನೆಯ ಮುಖ್ಯ ತಾಂತ್ರಿಕ ಅಧಿಕಾರಿಗಳಾದ ದಿನೇಶ ಶರ್ಮಾ.ಮಾತನಾಡಿ ಸಮೀರವಾಡಿ ಸಕ್ಕರೆ ಕಾರ್ಖಾನೆ ಮೇಲೆ ಹಿಂದಿನಿಂದಲೂ ರೈತ ಬಾಂದವರು ಇಟ್ಟಂತ ಪ್ರೀತಿ ವಿಶ್ವಾಸವೇ ನಮ್ಮ ಕಾರ್ಖಾನೆ ಕಬ್ಬು ನುರಿಸಲು ಕಾರಣ. ಸಾಕಷ್ಟು ಹೊಸ ಕಾರ್ಖಾನೆಗಳಾದರೂ ನಮ್ಮ ಕಾರ್ಖಾನೆಗೆ ಕಬ್ಬು ಕಡಿಮೆ ಆಗದಿರುವುದು ಸ್ಥಳೀಯ ಶಿವಲಿಂಗೇಶ್ವರ ಆಶೀರ್ವಾದವೆಂದು ಹೇಳಿದರು.
ಪ್ರಾರಂಭದಲ್ಲಿ ಸೈದಾಪೂರ ಕ್ರಾಸ್ ದಿಂದ ಕಾರ್ಖಾನೆಯವರಿಗೆ ಭವ್ಯ ವಿವಿಧ, ವಾದ್ಯ ಮೇಳದೊಂದಿಗೆ ಹಾಗೂ ಸ್ತ್ರೀಯರ ಡೊಳ್ಳು ಕುಣಿತ, ಗೊಂಬೆ ಆಟ,ನೋಡುಗರ ಕಣ್ಮಣಿ ಸೆಳೆಯುತ್ತಿದ್ದವು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾರ್ಖಾನೆ ಮುಂಭಾಗದಲ್ಲಿ ಸಾವಿರಾರು ಜನರ ಮದ್ಯೆ ಕಾರ್ಖಾನೆ ಅಧಿಕಾರಿಗಳು, ರೈತರು, ಭದ್ರತಾ ಸಿಬ್ಬಂದಿಗಳು, ಕಾರ್ಮಿಕರು ಕುಣಿದು ಕುಪ್ಪಳಿಸಿದರು.
ಕಾರ್ಖಾನೆಗೆ ಅತೀ ಹೆಚ್ಚು ಕಬ್ಬು ಕಳಿಸಿದವರಿಗೆ ಸನ್ಮಾನ ಮಾಡಿ ಸತ್ಕರಿಸಿದರು. ಈ ಸಮಯದಲ್ಲಿ ವಿ ಕೆ ಖಿಲಾರಿ. ವಿ ಎಸ್ ಕಣಬುರ. ಮಹಮದ ಚಾಹುಸ್. ವಿ ಪಿ ಕಣವಿ. ಅಮಿತ್ ತ್ರಿಪಾಟಿ.ಆರ್ ಎಸ್ ಶೆಟ್ಟರ್.ಡಿ ಎನ್ ಪಾಟೀಲ. ಎಸ್ ಎಂ ಪೇಟಿಮನಿ. ಆರ್ ಐ ಬಾಗೋಜಿ.ಆರ್ ಎನ್ ಸೊನವಾಲ್ಕರ. ಕೃಷ್ಣ ಗೋಡಿಗೌಡರ.
ಆನಂದ ಕೋಟಬಾಗಿ. ವಿಕ್ರಮ ಕನಕರಡ್ಡಿ. ಅಶೋಕ ಗುಣದಾಳ. ಯೂನಿಯನ್ ಪದಾಧಿಕಾರಿಗಳಾದ ಎನ್ ಪಿ ಮಾಳಿ. ಎಸ್ ಬಿ ಬಿ ಬಿರಾದಾರ. ಸಿ ಎಂ ಅಥಣಿ. ವಿ ಎಸ್ ಕಮತೆ. ಬಸವರಾಜ ಭದ್ರಶೇಟ್ಟಿ. ಸೈದಾಪುರ ಗ್ರಾಮ ಪ ಅಧ್ಯಕ್ಷ ಮಹಾಲಿಂಗ ಸನದ. ಕಬ್ಬು ಬೆಳೆಗಾರರ ಸಂಫದ ಅಧ್ಯಕ್ಷ ರಾಮನಗೌಡ್ ಪಾಟೀಲ. ಕಾರ್ಯದರ್ಶಿ ರಂಗನಗೌಡ ಪಾಟೀಲ. ಭೀಮಶಿ ಮಗದುಮ್. ಶಿವನಗೌಡ ಪಾಟೀಲ.ಲಕ್ಷ್ಮಣ ಕತ್ತಿ. ಮುರಿಗೆಪ್ಪ ಮಾಲಗಾರ.ಲಕ್ಷ್ಮಣ ಹುಚ್ಚರಡ್ಡಿ.ಭುಜಬಲಿ.ಕೆಂಗಾಲಿ. ಪ್ರಕಾಶ ನಾಯ್ಕಲ.ಲಕ್ಷ್ಮಣ ಕೂಡಲಗಿ.
ಮಲ್ಲಿಕಾರ್ಜುನ ಕಾನಗೌಡರ.ಚನ್ನು ದೇಸಾಯಿ. ಭೀಮಪ್ಪ ಹೊಸೂರ.ಪಿ ಟಿ ನಾಯ್ಕ. ಡಿ ಬಿ ನಂದನ್ನವರ. ಎಸ್ ಎ ಚೌಗಲಾ. ಬಿ ಬಿ ಹೊಸಮನಿ ಸೇರಿದಂತೆ ರೈತರು, ಕಾರ್ಮಿಕರು, ಆಡಳಿತ ಮಂಡಳಿ, ಹಾಗೂ ಭದ್ರತಾ ಸಿಬ್ಬಂದಿಗಳಿದ್ದರು. ವರದಿ ಮುರಿಗೆಪ್ಪ ಮಾಲಗಾರ