ಹಳ್ಳೂರ .
ಸಮೀಪದ ಗೋದಾವರಿ ಬಯೋರಿಫೈನರಿಸ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮೂ ಯಶಸ್ವಿಯಾಗಿದೆ.ಗುರುವಾರ ದಂದು ಸುಮಾರು 24.58 ಲಕ್ಷ ಟನ್ ಕಬ್ಬು ನುರಿಸಿ ಕಾರ್ಖಾನೆಯು ಇತಿಹಾಸದಲ್ಲಿಯೇ ಅತ್ಯಧಿಕ ದಾಖಲೆ ಮಾಡಿದೆ,
ರಾಜ್ಯಕ್ಕೆ ಕಬ್ಬು ನುರಿಸುವಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಶುಕ್ರವಾರ ದಂದು ಮುಂಜಾನೆ 9 ಗಂಟೆಗೆ ಕಬ್ಬು ನುರಿಸುವ ಹಂಗಾಮು ಮುಕ್ತಾಯ ಸಮಾರಂಭವು ಜರುಗುವುದು. ಸಮಾರಂಭಕ್ಕೆ ರೈತ ಬಾಂದವರು, ಕಾರ್ಮಿಕರು, ಆಡಳಿತ ವರ್ಗದವರು ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರಬೇಕೆಂದು ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.