ಗೋಕಾಕ :ಅಂತರರಾಜ್ಯ ಕಳ್ಳರ ಬಂಧನ ರೂ 8,25,000 /- ಮೌಲ್ಯದ 23 ಮೋಟಾರ್ ಸೈಕಲಗಳು ವಶ

Share the Post Now

 ಗೋಕಾಕ ಹಾಗೂ ಅಂಕಲಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಯ ಮುಂದೆ ಹಾಗೂ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ್ ಸೈಕಲ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಈ ಕುರಿತು ಅಂಕಲಗಿ, ಗೋಕಾಕ ಶಹರ, ಹಾಗೂ ಗೋಕಾಕ ಗ್ರಾಮೀಣ ಪೊಲೀಸ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿತ್ತು

ಕುಂದರಗಿ ಗ್ರಾಮದ ಲಕ್ಷ್ಮೀ ದೇವಸ್ಥಾನದ ಎದುರಿಗೆ ಇರುವ ಪಾಶ್ಚಾಪೂರ – ಅಂಕಲಗಿ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ಅಂಕಲಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸದರಿ ಕಳುವಾದ ಮೋಟಾರ್ ಸೈಕಲಗಳ ಪತ್ತೆ ಕುರಿತು ಮಾನ್ಯ ಎಸ್.ಪಿ. ಅವರು ಪ್ರಕರಣದ ಪತ್ತೆಗಾಗಿ ಗೋಪಾಲ ಆರ್. ರಾಠೋಡ ಸಿ.ಪಿ.ಐ ಗೋಕಾಕ ವೃತ್ತರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಎಮ್.ವೇಣುಗೋಪಾಲ ಹೆಚ್ಚುವರಿ ಎಸ್‌.ಪಿ.ಬೆಳಗಾವಿ. ಡಿ.ಎಚ್.ಮುಲ್ಲಾ ಡಿ.ಎಸ್.ಪಿ.ಗೋಕಾಕ ಉಪವಿಭಾಗರವರ ಮಾರ್ಗದರ್ಶನದಲ್ಲಿ ಸದರಿ ಮೋಟಾರ್ ಸೈಕಲ ಕಳ್ಳತನ ಪ್ರಕರಣಗಳ ತನಿಖೆ ಕೈಕೊಂಡು ದಿನಾಂಕ: 24-08-2023 ರಂದು ಇಬ್ಬರು ಅಂತರರಾಜ್ಯ ಮೋಟಾರ್ ಸೈಕಲ ಕಳ್ಳರನ್ನು ಮಹಾರಾಷ್ಟ್ರದ ಕೊಲ್ಲಾಪೂರ, ಕರವೀರ, ಇಂಚಲಕರಂಜಿ, ಹಾಥಕಣಗಲಾ, ಹಾಗೂ ಕರ್ನಾಟಕದ ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ, ಹಾಗೂ ವಿವಿದೆಡೆ ಕಳ್ಳತನವಾಗಿದ್ದ ಅಂದಾಜು 8,25,000 /- ರೂ ಮೌಲ್ಯದ ಒಟ್ಟು 23 ಮೋಟಾರ್ ಸೈಕಲಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಪಾಲ ಆರ್. ರಾಠೋಡ ಸಿ.ಪಿ.ಐ ಗೋಕಾಕ ವೃತ್ತ, ಎಚ್.ಡಿ.ಯರಝರ್ವಿ ಪಿ.ಎಸ್.ಐ ಅಂಕಲಗಿ ಪೊಲೀಸ ಠಾಣೆ ಎಮ್.ಡಿ.ಘೋರಿ ಪಿ.ಎಸ್.ಐ ಗೋಕಾಕ ಶಹರ ಪೊಲೀಸ ಠಾಣೆ ಹಾಗೂ ಕಿರಣ ಮೋಹಿತ ಗೋಕಾಕ ಗ್ರಾಮೀಣ ಪೊಲೀಸ ಠಾಣೆ ಮತ್ತು ಸಿಬ್ಬಂದಿ ಜನರಾದ ಬಿ.ವಿ.ನೇರ್ಲಿ, ವಿಠಲ ನಾಯಕ ಡಿ.ಜಿ.ಕೊಣ್ಣೂರ,.ಎಸ್‌.ವಿ.ಕಸ್ತೂರಿ, ಎಮ್.ಬಿ.ತಳವಾರ ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಎಸ್‌.ಬಿ.ಯಲ್ಲಪ್ಪಗೌಡರ, ಪಿ.ಕೆ.ಹೆಬ್ಬಾಳ, ಎಮ್.ಎಮ್.ಹಾಲೊಳ್ಳಿ, ಎ.ಆರ್.ಮಾಳಗಿ ಇವರ ಕಾರ್ಯವನ್ನು ಮಾನ್ಯ ಎಸ್.ಪಿ. ಸಾಹೇಬರು ಶ್ಲಾಘಿಸಿರುತ್ತಾರೆ. ಹಾಗೂ ಇದೇ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸೂಚಿಸಿರುತ್ತಾರೆ.

ಮಾನ್ಯ ಎಸ್.ಪಿ. ಬೆಳಗಾವಿರವರು ಮೋಟಾರ್ ಸೈಕಲಗಳನ್ನು ಮನೆಯ ಮುಂದೆ ರಸ್ತೆಯ ಬದಿಗೆ ನಿಲ್ಲಿಸುವಾಗ ಸರಿಯಾದ ರೀತಿಯಲ್ಲಿ ಹ್ಯಾಂಡಲಾಕ ಮಾಡುವಂತೆ ಹಾಗೂ ಸಾಧ್ಯವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾಗಳು ಇರುವ ಕಡೆಗೆ ಮೋಟಾರ್ ಸೈಕಲಗಳನ್ನು ನಿಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು

Leave a Comment

Your email address will not be published. Required fields are marked *

error: Content is protected !!