ಬೆಳಗಾವಿ: ಸಾರ್ವಜನಿಕರ ಹಿತದೃಷ್ಟಿ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರಸ್ತುತವಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ, ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿಸುವ ಕುರಿತು ಜನರಿಂದ ತೀವ್ರ ಒತ್ತಡವಿದ್ದು, ಶೀಘ್ರದಲ್ಲೇ ಎರಡು ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಧ್ವಜಾರೋಹಣ ನೆರವೇರಿಸಿಸ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಭಾಗದ ಶಾಸಕರ ಸಭೆಯಲ್ಲಿ ಜಿಲ್ಲಾ ವಿಭಜನೆ ಕುರಿತು ಚರ್ಚೆಯಾಗಿದೆ. ಸರ್ಕಾರದ ಮೇಲೆಒತ್ತಡವಿದೆ ಎಂದರು.
ಪ್ರಸ್ತುತವಾಗಿರುವ ಬೆಳಗಾವಿ ತಾಲೂಕನ್ನು ವಿಭಜಸಿ ಹೊಸ ತಾಲೂಕಗಳನ್ನು ಶೀಘ್ರದಲ್ಲಿ ಸರಕಾರ ಘೋಷಣೆ ಮಾಡಲಿದೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಶಾಸಕ ಸೇಠ್ ಮತ್ತಿತರರು ಉಪಸ್ಥಿತರಿದ್ದರು