ರಮೇಶ್ ಸಾಹುಕಾರರಿಗೆ ಕೃತಜ್ಞತಾ, ಗೌರವೀಯ ಸನ್ಮಾನ..

Share the Post Now

ಬೆಳಗಾವಿ : ಜಿಲ್ಲೆಯ ಗೋಕಾಕ ತಾಲೂಕು ಪ್ರಭಾವಿ ಮತಕ್ಷೇತ್ರವಾಗಿದ್ದು, ಇಲ್ಲಿ ಮಾಜಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿ ಅವರ ಬೆಂಬಲಿಗರದ್ದು ನಿರಂತರ ವಿಜಯಪತಾಕೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ..

ಕ್ಷೇತ್ರದ ಅಕ್ಕತಂಗೇರಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಾಮ ನಿರ್ದೇಶಿತ ಸದಸ್ಯರಾಗಿ ಶಾಸಕರ ಬೆಂಬಲಿಗರಾದ ಬಸವರಾಜ್ ಬೆಣ್ಣಿ ಅವರು ಆಯ್ಕೆಯಾಗಿದ್ದು, ಇವರ ಆಯ್ಕೆಗೆ ಶಾಸಕರ ಬೆಂಬಲ ಇರುವುದರ ಮಾಹಿತಿಯಿದೆ..

ಪಿಕೆಪಿಎಸ್ ಸದಸ್ಯರಾಗಿ ನೇಮಕವಾದ ನಂತರ ಬಸವರಾಜ್ ಬಸವನ್ನೆಪ್ಪ ಬೆಣ್ಣಿ ಅವರು, ಇಂದು ಮೊದಲಿಗೆ ಶಾಸಕರಾದ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಆಗಿ, ಅವರಿಗೆ ತಮ್ಮ ಗೌರವಪೂರ್ವಕ ಸನ್ಮಾನ ಮಾಡಿ, ತಮ್ಮ ಆಯ್ಕೆಗೆ ಶ್ರಮಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರುದರು, ಇದೇ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ಭೀಮನಗೌಡ ಪೊಲೀಸಗೌಡರು, ಮುನ್ನಾ ದೇಸಾಯಿ, ವಿರೂಪಾಕ್ಷ ಅಂಗಡಿ, ಸುರೇಶ ಸನದಿ ಸೇರಿದಂತೆ ಹಲವು ಮುಖಂಡರು ಸಾಕ್ಷಿಯಾಗಿದ್ದರು..

ಉತ್ತಮ, ಸಮಾಜಮುಖಿ ಕಾರ್ಯ ಮಾಡುವ ಸಾಮರ್ಥ್ಯ ಹಾಗೂ ಗುಣವಿರುವ ತಮ್ಮ ಬೆಂಬಲಿಗರನ್ನು ಬೆಳೆಸಿ, ಉತ್ತಮ ಸ್ಥಾನಮಾನ ನೀಡುವ ಒಳ್ಳೆಯ ಮನಸ್ಸು ರಮೇಶ ಜಾರಕಿಹೊಳಿ ಅವರಿಗೆ ಮೊದಲಿನಿಂದಲೂ ಇದ್ದಿದ್ದು, ಅವರ ಕೃಪಾಶೀರ್ವಾದದಿಂದ ಮುಂದೆ ಬಂದ ಏಷ್ಟೋ ನಾಯಕರು, ಇಂದು ರಾಜ್ಯದಲ್ಲಿ ಒಳ್ಳೆಯ ಅಧಿಕಾರ ಹೊಂದಿ, ಅವರನ್ನು ನೆನೆದು ಕೃತಜ್ಞತೆ ತೋರುವ ಒಳ್ಳೆಯವರು ಒಂದು ಕಡೆಯಾದರೆ,

ಮತ್ತೊಂದೆಡೆ, ಕೆಲವರು ಇವರಿಂದಲೇ ರಾಜಕಾರಣದಲ್ಲಿ ಅಧಿಕಾರ, ಅಂತಸ್ತು ಪಡೆದುಕೊಂಡು, ಉಪಕಾರ ಮಾಡಿದವರಿಗೆ ಅಪಕಾರ ಮಾಡಿ, ಮಾಯಾಮೃಗದ ಬೆನ್ನುಹತ್ತಿದ ಮಹನೀಯರು ಇರುವರು, ಈ ಎರಡು ವಿಧದ ಜನರ ನಡುವೇ, “ಕಾಲಾಯ ತಸ್ಮೈ ನಮಃ” ಎನ್ನುವ ಹಾಗೆ ಕಾಲವೇ ಎಲ್ಲದಕ್ಕೂ ಉತ್ತರ ಹೇಳುವದು ಎಂಬುವದು ಕೆಲ ಜನರ ಅಭಿಮತವಾಗಿದೆ..

Leave a Comment

Your email address will not be published. Required fields are marked *

error: Content is protected !!